Breaking News

ರಾಯಚೂರಿನಲ್ಲಿ ಅಕಾಲಿಕ ಮಳೆ – ಲಕ್ಷಾಂತರ ಮೌಲ್ಯದ ಸಜ್ಜೆ, ಜೋಳ ಹಾನಿ

Spread the love

ರಾಯಚೂರು: ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಲವೆಡೆ ಸಜ್ಜೆ, ಜೋಳದ ಬೆಳೆ ಹಾಳಾಗಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಹೆಚ್.ಸಿದ್ದಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆಹಾನಿಯಾಗಿದೆ. ಹೆಚ್.ಸಿದ್ದಾಪುರ ಗ್ರಾಮದ ರೈತ ಕೃಷ್ಣಾಗೆ ಸೇರಿದ 7 ಎಕರೆ ಸಜ್ಜೆ ಬೆಳೆ ಸಂಪೂರ್ಣ ನೆಲಕ್ಕಚ್ಚಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ನಷ್ಟದಿಂದ ರೈತ ಕಂಗಾಲಾಗಿದ್ದಾರೆ. ನೆಲಕ್ಕಚ್ಚಿದ ಬೆಳೆಯನ್ನ ಎತ್ತಿನಿಲ್ಲಿಸಿ ಉಳಿಸಿಕೊಳ್ಳಲು ರೈತ ಹರಸಾಹಸ ಪಡುತ್ತಿದ್ದಾರೆ. ಗಾಳಿ ಹಾಗೂ ಮಳೆಗೆ ಜಿಲ್ಲೆಯ ಹಲವೆಡೆ ಭತ್ತ, ಜೋಳದ ಬೆಳೆಗಳಿಗೆ ಹಾನಿಯಾಗಿದೆ. ಕೂಡಲೇ ಬೆಳೆ ಪರಿಶೀಲನೆ ನಡೆಸಿ, ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿದ್ದು, ಜಿಲ್ಲೆಯ ರೈತರನ್ನ ಕಂಗೆಡಿಸಿದೆ. ಒಣಗಲು ಹಾಕಿದ್ದ ಮೆಣಸಿನಕಾಯಿಗೂ ಸಹ ಪರಿಣಾಮ ಬೀರಿದೆ. ಮೆಣಸಿನಕಾಯಿ ಒದ್ದೆಯಾಗಿದ್ದು, ರೈತರನ್ನ ಚಿಂತೆಗೀಡುಮಾಡಿದೆ.


Spread the love

About Laxminews 24x7

Check Also

ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿಗಾಗಿ ಹಾಹಾಕಾರ: ಗ್ರಾ.ಪಂ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರ ಹೋರಾಟ

Spread the love ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ತಾಲೂಕಿನ ಚಿಕ್ಕಕೊಟ್ನೆಕಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ