Breaking News

ಹಣ್ಣಿನಲ್ಲಿ ಪಟಾಕಿ ಇರಿಸಿ ಆನೆಯನ್ನು ಹತ್ಯೆ ಮಾಡಿದ ಮೂವರು ಶಂಕಿತರ ಬಂಧನ

Spread the love

ಕೊಚ್ಚಿನ್,ಜೂ.5- ಕೇರಳದ ಅರಣ್ಯ ಪ್ರದೇಶದಲ್ಲಿ ಅನಾನಸ್ ಹಣ್ಣುಗಳಲ್ಲಿ ಪಟಾಕಿಯನ್ನು ಇರಿಸಿ ಗರ್ಭಿಣಿ ಆನೆಯನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಬಂಧಿತರನ್ನು ಅಮ್ಜದ್ ಅಲಿ ಮತ್ತು ತಮೀಮ್ ಶೇಖ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿಯ ಗುರುತು ಗೌಪ್ಯವಾಗಿಡಲಾಗಿದೆ. ಈ ಆನೆ ಹತ್ಯೆ ಹಿಂದೆ ವ್ಯವಸ್ಥಿತ ಜಾಲದ ಸಂಚು ಇರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದ್ದು, ಮತ್ತಷ್ಟು ಜನರು ಬಲೆ ಬೀಳುವ ಸಾಧ್ಯತೆ ಇದೆ.

ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸ್ವತಃ ಟ್ವಿಟರ್ ಮೂಲಕೀ ವಿಷಯ ತಿಳಿಸಿದ್ದು, ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಆನೆ ಹತ್ಯೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅರಣ್ಯ ಸಚಿವ ಕೆ.ರಾಜು ಅವರು ಸಹ ಈ ಪ್ರಕರಣ ಸಂಬಂಧ ಮೂವರು ಶಂಕಿತರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ಮೃತಪಟ್ಟ ಮೂಕ ಪ್ರಾಣಿಗೆ ನ್ಯಾಯ ಒದಗಿಸುವುದಾಗಿ ತಿಳಿಸಿದ್ದಾರೆ.

ವ್ಯಾಪಕ ಆಕ್ರೋಶ: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಗರ್ಭಿಣಿ ಆನೆಯ ಸಾವಿಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸ್ಪೋಟಕವಿದ್ದ ಪೈನ್‍ಆಪಲ್‍ನ್ನು ಆನೆ ತಿಂದಿರುವುದರಿಂದ ಬೇರೆ ಏನೂ ತಿನಲು, ಕುಡಿಯಲು ಸಾಧ್ಯವಾಗಿಲ್ಲ ಎಂದು ಮರುಕಪಟ್ಟಿದ್ದಾರೆ.


Spread the love

About Laxminews 24x7

Check Also

ಏಕಾಏಕಿ ಫೀಸ್​​ ಹೆಚ್ಚಳ: ಶಾಲೆಗೆ ಮುತ್ತಿಗೆ ಹಾಕಿದ ಪೋಷಕರು 

Spread the loveದೇವನಹಳ್ಳಿ, ಏಪ್ರಿಲ್​ 09: ಕರ್ನಾಟಕದಲ್ಲಿ ಈಗಾಗಲೇ ಅಗತ್ಯ ದಿನ ಬಳಕೆಯ ವಸ್ತುಗಳಾದ ಹಾಲು, ಗ್ಯಾಸ್​​, ಪೆಟ್ರೋಲ್​, ಡಿಸೇಲ್​ ಸೇರಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ