Breaking News

ಜುಲೈ ಅಥವಾ ಆಗಸ್ಟ್‌ನಲ್ಲಿ ಚಾರ್ಲಿ ದರ್ಶನ ಗ್ಯಾರೆಂಟಿ

Spread the love

ಅವನೇ ಶ್ರೀಮನ್ನಾರಾಯಣ’ ಚಿತ್ರದ ನಂತರ ನಟ ರಕ್ಷಿತ್‌ ಶೆಟ್ಟಿ, “777 ಚಾರ್ಲಿ’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಇದರ ನಡುವೆ “ಸಪ್ತಸಾಗರದಾಚೆ ಎಲ್ಲೋ’, “ಪುಣ್ಯಕೋಟಿ’ ಹೀಗೆ ಮೂರ್‍ನಾಲ್ಕು ಚಿತ್ರಗಳು ರಕ್ಷಿತ್‌ ಶೆಟ್ಟಿ ಕೈಯಲ್ಲಿದೆ.

ಸದ್ಯಕ್ಕೆ ರಕ್ಷಿತ್‌ ಶೆಟ್ಟಿ ಗಮನ “777 ಚಾರ್ಲಿ’ಯ ಕಡೆಗಿರುವುದರಿಂದ, ಸುಮಾರು ಒಂದೂವರೆ ವರ್ಷದಿಂದ ರಕ್ಷಿತ್‌ ಶೆಟ್ಟಿ ಆಯಂಡ್‌ ಟೀಮ್‌ “777 ಚಾರ್ಲಿ’ಯ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಆದರೆ ಹಗಲಿರುಳು “777 ಚಾರ್ಲಿ’ಯ ಕೆಲಸಗಳು ನಡೆಯುತ್ತಿದ್ದರೂ, ಈ ಚಿತ್ರ ತೆರೆಗೆ ಯಾವಾಗ ಬರುತ್ತದೆ ಎಂಬ ಬಗ್ಗೆ ಪ್ರೇಕ್ಷಕರಿಗೂ ಮಾಹಿತಿ ಇರಲಿಲ್ಲ. ಇನ್ನು ಚಿತ್ರತಂಡ ಕೂಡ ಈ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.

ಈಗ “ಚಾರ್ಲಿ ಬಿಡುಗಡೆ ಯಾವಾಗ?’ ಎಂಬ ಸಿನಿಪ್ರಿಯರ ಪ್ರಶ್ನೆಗೆ ಸ್ವತಃ ರಕ್ಷಿತ್‌ ಶೆಟ್ಟಿ ಅವರೇ ಉತ್ತರಿಸಿದ್ದಾರೆ. ಎಲ್ಲ ಅಂದು ಕೊಂಡಂತೆ ನಡೆದರೆ, ಇದೇ ಜುಲೈ ಅಥವಾ ಆಗಸ್ಟ್‌ನಲ್ಲಿ “777 ಚಾರ್ಲಿ’ ಬಿಡುಗಡೆ ಪಕ್ಕಾ ಎಂದಿದ್ದಾರೆ ರಕ್ಷಿತ್‌ ಶೆಟ್ಟಿ. ಹೌದು, ಬಹಳ ದಿನಗಳ ಬಳಿಕ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಫೇಸ್‌ಬುಕ್‌ ಲೈವ್‌ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ನಟ ರಕ್ಷಿತ್‌ ಶೆಟ್ಟಿ, “ಸದ್ಯ ಚಾರ್ಲಿ ಯ ಬಹುಭಾಗ ಶೂಟಿಂಗ್‌ ಮುಕ್ತಾಯವಾಗಿದೆ. ಇನ್ನು ಕೆಲವೇ ಕೆಲವು ದಿನಗಳ ಶೂಟಿಂಗ್‌ ಮಾತ್ರ ಬಾಕಿ ಇದೆ. ಲಾಕ್‌ಡೌನ್‌ ಅವಧಿಯಲ್ಲೇ ಸಿನಿಮಾದ ಮೊದಲ ಭಾಗದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಪೂರ್ಣಗೊಂಡಿದೆ. ಇದೀಗ ಸೆಕೆಂಡ್‌ ಹಾಫ್ ಪೋಸ್ಟ್‌ ಪೊ›ಡಕ್ಷನ್‌ ಕೆಲಸಗಳು ಮಾತ್ರವೇ ಬಾಕಿ ಇದೆ.

ಶೀಘ್ರದಲ್ಲಿಯೇ ಆ ಕೆಲಸಗಳೂ ಪೂರ್ಣವಾಗಲಿದ್ದು, ಸಿನಿಮಾವನ್ನು ಇದೇ ಜುಲೈ ಅಥವಾ ಆಗಸ್ಟ್‌ನಲ್ಲಿ ಬಿಡುಗಡೆ ಮಾಡುತ್ತೇವೆ’ ಹೇಳಿದ್ದಾರೆ. ಇನ್ನು ರಕ್ಷಿತ್‌ ಶೆಟ್ಟಿ ಫೇಸ್‌ ಬುಕ್‌ ಲೈವ್‌ ಬಂದ ಸಂದರ್ಭದಲ್ಲಿ, ಕೆಲ ಅಭಿಮಾನಿಗಳು ಸುದೀಪ್‌ ಅವರೊಂದಿಗೆ ಸಿನಿಮಾ ಯಾವಾಗ ಎಂಬ ಪ್ರಶ್ನೆಯನ್ನೂ ರಕ್ಷಿತ್‌ ಶೆಟ್ಟಿ ಅವರ ಮುಂದಿಟ್ಟರು. ಅಭಿಮಾನಿಗಳ ಈ ಪ್ರಶ್ನೆಗೂ ಉತ್ತರಿಸಿದ ರಕ್ಷಿತ್‌ ಶೆಟ್ಟಿ, “ಸದ್ಯ “777 ಚಾರ್ಲಿ’ ಬಿಡುಗಡೆ ಆಗಬೇಕಿದೆ.

ಆನಂತರ “ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಪ್ರಾರಂಭವಾಗಲಿದೆ. ಅದಾದ ನಂತರ ರಿಚ್ಚಿ, ಆ ನಂತರ “ಪುಣ್ಯ ಕೋಟಿ’ ಸಿನಿಮಾ ಪ್ರಾರಂಭವಾಗಲಿದೆ. ಸುದೀಪ್‌ ಅವರಿಗಾಗಿ ಕಥೆ ರೆಡಿ ಮಾಡು ತ್ತಿದ್ದೇನೆ. ಈಗಾಗಲೇ ಒಪ್ಪಿಕೊಂಡಿರುವ ನನ್ನ ಸಿನಿಮಾಗಳು ಪೂರ್ಣಗೊಂಡ ಬಳಿಕ ಸುದೀಪ್‌ ಜೊತೆ ಸಿನಿಮಾ ಪ್ರಾರಂಭಿಸುತ್ತೇನೆ’ ಎಂದಿದ್ದಾರೆ.

ಒಟ್ಟಾರೆ “777 ಚಾರ್ಲಿ’ಯ ಬಿಡುಗಡೆಯ ಬಗ್ಗೆ ಸಿನಿಪ್ರಿಯರ ಪ್ರಶ್ನೆಗೆ ರಕ್ಷಿತ್‌ ಶೆಟ್ಟಿ ಕಡೆಯಿಂದ ಉತ್ತರ ಸಿಕ್ಕಿದ್ದು, ಈ ವರ್ಷದ ಮಧ್ಯ ಭಾಗದಲ್ಲಿ ರಕ್ಷಿತ್‌ ಶೆಟ್ಟಿ ಹೊಸಚಿತ್ರ ತೆರೆಗೆ ಬರೋದು ಪಕ್ಕಾ ಆದಂತಾಗಿದೆ.


Spread the love

About Laxminews 24x7

Check Also

ರಾಜ್ಯಪಾಲರ ಭಾಷಣದ ಮೊದಲ 11 ಪ್ಯಾರಾಗಳಲ್ಲಿ ವಿಬಿ ಜಿ ರಾಮ್​ ಜಿ ಕಾಯ್ದೆ ಟೀಕಿಸಿ ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕೆ

Spread the loveಬೆಂಗಳೂರು : ರಾಜ್ಯಪಾಲರು ಹಾಗೂ ಸರ್ಕಾರದ ಸಂಘರ್ಷದ ಮಧ್ಯೆ ರಾಜ್ಯಪಾಲರ ಭಾಷಣವನ್ನು ಸದನದಲ್ಲಿ ಮಂಡಿಸಲಾಯಿತು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ