Breaking News

ಅರೆಬೆತ್ತಲೆಯಾಗಿ ಮಹಿಳೆಯ ಶವ ಪತ್ತೆ – ಅತ್ಯಾಚಾರ ನಡೆಸಿ ಕೊಲೆ ….?

Spread the love

ಚಿಕ್ಕಬಳ್ಳಾಪುರ: ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾರಕೂರು ಕ್ರಾಸ್ ಬಳಿ ನಡೆದಿದೆ.

ಕಾರಕೂರು ಕ್ರಾಸ್ ಬಳಿಯ ನಿರ್ಮಾಣ ಹಂತದ ಬಡವಾಣೆಯ ಕಮಾನು ಗೋಡೆಯ ಸೆಕ್ಯೂರಿಟಿ ಗಾರ್ಡ್ ಕೊಠಡಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ವೇಲ್‍ನಿಂದ ಕತ್ತು ಬಿಗಿದು ಕೊಲೆ ಮಾಡಲಾಗಿದ್ದು, ಅರೆಬೆತ್ತಲೆಯಾಗಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.

ಮಾಹಿತಿ ತಿಳಿದು ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತ ಮಹಿಳೆ ಸರಿ ಸುಮಾರು 30 ವರ್ಷ ಆಸುಪಾಸಿನವರಾಗಿದ್ದು, ಆಕೆಯ ಗುರುತು ಮತ್ತು ವಿಳಾಸ ಇನ್ನೂ ಪತ್ತೆಯಾಗಿಲ್ಲ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Spread the love

About Laxminews 24x7

Check Also

ಮನೆ ತೆರವಿಗೆ ಮುಂದಾದ ತಹಶೀಲ್ದಾರ್ – ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಯತ್ನ

Spread the loveಚಿಕ್ಕಬಳ್ಳಾಪುರ: ನಿರ್ಮಾಣ ಹಂತದ ಮನೆ ತೆರವು ಮಾಡಲು ಮುಂದಾಗಿದ್ದಕ್ಕೆ ವ್ಯಕ್ತಿಯೋರ್ವ ತಹಶೀಲ್ದಾರ್  ಹೆಸರು ಉಲ್ಲೇಖಿಸಿ ಡೆತ್ ನೋಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ