ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಹೆಲ್ತ್ ಎಮೆರ್ಜೆನ್ಸಿ ಎದುರಾಗಲಿದೆ. ಕೊರೊನಾ ರಿಪೋರ್ಟ್ ಸೇರಿ ಬೇರೆ ಯಾವುದೇ ಆರೋಗ್ಯ ಸಂಬಂಧಿ ರಿಪೋರ್ಟ್ ಸಿಗಲ್ಲ. ಯಾಕಂದರೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯರು, ಇಂದಿನಿಂದ ಆರೋಗ್ಯ ಸೇವೆಯಲ್ಲಿ, ಕೆಲಸಗಳಲ್ಲಿ ತೊಡಗಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ.
ಆರೋಗ್ಯ ವರದಿಗಳನ್ನ ಸರ್ಕಾರಕ್ಕೆ ಸಲ್ಲಿಸದೇ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ. ಒಂದು ವಾರದೊಳಗೆ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಸರ್ಕಾರಿ ಆಸ್ಪತ್ರೆ ಬಂದ್ ಮಾಡುತ್ತೇವೆ. ಕೇವಲ ಎಮರ್ಜೆನ್ಸಿ ಮಾತ್ರ ಓಪನ್ ಇರಲಿದೆ ಅನ್ನೋ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ.
ಐಎಎಸ್ ಅಧಿಕಾರಿಗಳ ತಮ್ಮನ್ನು ಮುಕ್ತ ಮಾಡಬೇಕು. ನಂಜನಗೂಡು ಆಸ್ಪತ್ರೆ ವೈದ್ಯರ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ವೇತನ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ವೈದ್ಯಕೀಯ ಸಂಘ ಸರ್ಕಾರದ ಮುಂದೆ ಇಟ್ಟಿದೆ.
ಬೇಡಿಕೆಗಳು ಏನೇನು?
* ಸರ್ಕಾರದಿಂದ ಡಾಕ್ಟರ್ಸ್ ಡೇ ಮಾಡುವಂತೆ ಬೇಡಿಕೆ
* ಕೊವಿಡ್ ವೇಳೆ ಮೃತ ಪಟ್ಟ ವೈದ್ಯರಿಗೆ ಸರ್ಕಾರ ಪರಿಹಾರ ನೀಡಿಲ್ಲ, ಪರಿಹಾರ ನೀಡುವಂತೆ ಬೇಡಿಕೆ
* ಪ್ರಮುಖವಾಗಿ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯ
* ಬಿಬಿಎಂಪಿಗೆ ನೀಡಿರುವ 48 ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನ ವಾಪಸ್ ನೀಡುವಂತೆ ಒತ್ತಾಯ
* ಡಿಸಿ ಮತ್ತು ಸಿಇಓಗಳ ದಬ್ಬಾಳಿಕೆಯನ್ನ ತಪ್ಪಿಸಿಬೇಕು
* ಇಂದಿನಿಂದ ಸರ್ಕಾರಕ್ಕೆ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
* ಆನ್ಲೈನ್ ಆಗಲಿ ಅಥವಾ ಆಫ್ಲೈನ್ ಆಗಲಿ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
* ಕೋವಿಡ್ ರಿಪೋರ್ಟ್ಗಳನ್ನು ಸಲ್ಲಿಸದಿರಲು ನಿರ್ಧಾರ
* ರಾಷ್ಟ್ರೀಯ ಕಾರ್ಯಕ್ರಮಗಳ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
* ಮಲೇರಿಯಾ, ಜಂತುಹುಳು, ಕುಷ್ಟರೋಗ ಸೇರಿದಂತೆ ಇನ್ನಿತರ ವರದಿಗಳನ್ನ ಸರ್ಕಾರಕ್ಕೆ ವರದಿಗಳನ್ನ ಸಲ್ಲಿಸದಿರಲು ನಿರ್ಧಾರ
* ಡಿಸಿ ಮತ್ತು ಸಿಇಓ ಮೀಟಿಂಗ್ ಗಳಲ್ಲಿ ಭಾಗವಹಿಸದಿರಲು ನಿರ್ಧಾರ
ಸರ್ಕಾರ ವೈದ್ಯರ ಪ್ರತಿಭಟನೆಯಿಂದ ಆಗುವ ಅನಾಹುತಗಳೇನು?
* ಕೋವಿಡ್ ವರದಿಗಳನ್ನ ನೀಡದಿದ್ದರೆ ಮತ್ತಷ್ಟು ಕೋವಿಡ್ ಕೇಸ್ ಹೆಚ್ಚಾಗ್ತಾವೆ
* ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಆಸ್ಪತ್ರೆ ಕ್ಲೋಸ್ ಮಾಡಿದ್ರೆ ಕೋವಿಡ್ ಉಲ್ಬಣಗೊಳ್ಳುತ್ತೆ
* ರಾಜ್ಯದಲ್ಲಿ ಸಾವು ನೋವು ಹೆಚ್ಚಾಗುವ ಸಾಧ್ಯತೆ
* ರಾಷ್ಟ್ರೀಯ ಕಾರ್ಯಕ್ರಮಗಳ ವರದಿ ನೀಡದಿದ್ದರೆ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮರ್ಯಾದೆ ಹೋಗುತ್ತೆ
* ವೈದ್ಯರ ಪ್ರತಿಭಟನೆಯಿಂದ ಆರೋಗ್ಯ ತುರ್ತು ಪರಿಸ್ಥಿತಿ ಉಲ್ಬಣಗೊಳ್ಳುತ್ತೆ
* ಡಿಸಿ ಮತ್ತು ಸಿಇಓ ಮೀಟಿಂಗ್‍ಗಳಿಗೆ ವೈದ್ಯರು, ವೈದ್ಯಾಧಿಕಾರಿಗಳು ಅಟೆಂಡ್ ಆಗದಿದರೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಷ್ಟ
ಇಂದಿನಿಂದ ಒಂದು ವಾರದ ಒಳಗೆ ಸರ್ಕಾರ ಎಚ್ಚೆತ್ತು ಬೇಡಿಕೆ ಈಡೇರಿಸದಿದ್ದರೆ ಸರ್ಕಾರಿ ಆಸ್ಪತ್ರೆಗಳನ್ನು ಕ್ಲೋಸ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಇದೇ ತಿಂಗಳ 21 ರಿಂದ ಆಸ್ಪತ್ರೆ ಕ್ಲೋಸ್ ಮಾಡಲು ನಿರ್ಧಾರ ಮಾಡಲಾಗಿದ್ದು, ಎಮರ್ಜೆನ್ಸಿ ಮಾತ್ರ ಓಪನ್ ಮಾಡಲಾಗುತ್ತಿದೆ. ಅಲ್ಲದೇ ಸೆಪ್ಟೆಂಬರ್ 21 ರಿಂದ ಬೆಂಗಳೂರು ಚಲೋ ಆರಂಭ ಮಾಡಲಿದ್ದಾರೆ. ಬೆಂಗಳೂರು ಚಲೋ ಆರಂಭ ಮಾಡಿ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ.