Breaking News

ಸರ್ಕಾರದ ರಚನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂಬೈನಲ್ಲೇ ಇರುವಂತೆ ಸಿ.ಟಿ.ರವಿಗೆ ಸೂಚನೆ

Spread the love

ಮುಂಬೈ: ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ವಿರುದ್ಧ ಮುನಿಸಿಕೊಂಡಿರುವ ಶಿವಸೇನೆಯ ಬಂಡಾಯ ಶಾಸಕರು (Shiv Sena Rebel MLAs) ಬುಧವಾರ ಮಧ್ಯರಾತ್ರಿ ಗೋವಾ ತಲುಪಿದ್ದಾರೆ.

ಗುವಾಹತಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಶಾಸಕರು ಎರಡು ವಿಶೇಷ ಬಸ್​ಗಳಲ್ಲಿ ಗೋವಾದ ಡೋನಾಪಾಲ್​ನಲ್ಲಿರುವ ತಾಜ್​ ಕನ್​ವೆಷನ್ ಸೆಂಟರ್ ಹೋಟೆಲ್​ಗೆ ತೆರಳಿದರು. ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆಯನ್ನು (Eknath Shinde) ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಭೇಟಿಯಾಗಿ, ರಹಸ್ಯ ಮಾತುಕತೆ ನಡೆಸಿದರು. ಸುಮಾರು ಒಂದು ತಾಸು ಇವರ ಮಾತುಕತೆ ನಡೆಯಿತು. ಈ ವೇಳೆ ಬಂಡಾಯ ಶಾಸಕರ ಮುಂದಿನ ರಾಜಕೀಯ ನಡೆಯ ಬಗ್ಗೆ ಚಿಂತನೆ ನಡೆಯಿತು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರಿಗೆ ಫೋನ್ ಮಾಡಿದ ಪ್ರಮೋದ್ ಸಾವಂತ್, ಏಕನಾಥ್ ಶಿಂಧೆ ಅವರೊಂದಿಗೆ ಮಾತನಾಡಿಸಿದರು. ಇಂದು ಈ ಶಾಸಕರು ಗೋವಾದಿಂದ ಮುಂಬೈಗೆ ತೆರಳಲಿದ್ದಾರೆ.

ಮುಂಬೈಗೆ ಸಿಟಿ ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕರ್ನಾಟಕದ ಪ್ರಮುಖ ಬಿಜೆಪಿ ನಾಯಕ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರಿಗೆ ಮುಂಬೈಗೆ ತೆರಳುವಂತೆ ಹೈಕಮಾಂಡ್​ ಸೂಚನೆ ನೀಡಿದೆ. ಸರ್ಕಾರದ ರಚನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂಬೈನಲ್ಲೇ ಇರುವಂತೆ ಸಿ.ಟಿ.ರವಿಗೆ ಸೂಚನೆ ನೀಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಸಿ.ಟಿ.ರವಿ ಮಹಾರಾಷ್ಟ್ರದ ಉಸ್ತುವಾರಿಯಾಗಿದ್ದರು.

ಔರಂಗಾಬಾದ್, ಉಸ್ಮಾನಾಬಾದ್ ಹೆಸರು ಬದಲಾವಣೆ

ಮಹಾರಾಷ್ಟ್ರದಲ್ಲಿ ಬಹುದಿನಗಳಿಂದ ಚರ್ಚೆಯಲ್ಲಿದ್ದ ಔರಂಗಾಬಾದ್ ಮತ್ತು ಉಸ್ಮಾನಾಬಾದ್​ ನಗರಗಳ ಹೆಸರನ್ನು ಬದಲಿಸುವ ಪ್ರಸ್ತಾವಕ್ಕೆ ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ರಾತ್ರಿ ಒಪ್ಪಿಗೆ ಸೂಚಿಸಿತು. ಔರಂಗಾಬಾದ್ ನಗರದ ಹೆಸರನ್ನು ಸಂಭಾಜಿನಗರವೆಂದು, ಉಸ್ಮಾನಾಬಾದ್ ನಗರಕ್ಕೆ ಧಾರಾಶಿವ ಎಂದು ಹೆಸರು ಇರಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಶರದ್ ಪವಾರ್ ಹಾಗೂ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಹೇಳಿದರು. ಶಿವಸೇನೆ ಸಂಘಟನೆ ಪ್ರಾರಂಭಿಸಿ ಜೂನ್ 19ಕ್ಕೆ 56 ವರ್ಷವಾಗುತ್ತದೆ. ಆರಂಭದ ದಿನದಿಂದಲೂ ಎಲ್ಲಾ ರೀತಿಯ ಜನರನ್ನೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ರಿಕ್ಷಾ ಓಡಿಸವವರು, ಕೂಲಿನಾಲಿ ಮಾಡುವವರು, ಅತ್ಯಂತ ಶೋಷಿತ ವರ್ಗದವರು ನನ್ನ ಜೊತೆಗೆ ಇದ್ದರು ಎಂದು ಉದ್ಧವ್ ಹೇಳಿದರು.

ಅಧಿಕಾರ ಶಿವಸೇನೆಗೆ ಬಂದ ನಂತರ ಅವರಿಗೆ ಬೇಕಾದ ರೀತಿಯ ಸಚಿವ ಸ್ಥಾನ ಹಾಗೂ ಪದವಿಯನ್ನು ನೀಡಿದ್ದೆವು. ಇಂತಹ ಜನ ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಾನು ಮಾತೋಶ್ರೀಗೆ ಬಂದ ನಂತರ ಸಾಕಷ್ಟು ಜನ ಬಂದರು. ಅದರಲ್ಲಿ ಎಲ್ಲಾ ರೀತಿಯ ಜನರು ಇರುತ್ತಾರೆ. ಅವರು ನನಗೆ ಮನೋಬಲ ತುಂಬುವ ಕಾರ್ಯ ಮಾಡಿದ್ದಾರೆ. ಸಾಹೇಬರೆ ನೀವು ಏನು ಯೋಜನೆ ಮಾಡಬೇಡಿ ನಿಮ್ಮ ಜೊತೆ ನಾವಿದ್ದೇವೆ ನಿಮ್ಮ ಹೋರಾಟ ಮುಂದುವರೆಸಿ ಎಂದು ಜನರು ನನಗೆ ಆತ್ಮಸೈರ್ಯ ತುಂಬಿದರು ಎಂದು ನೆನಪಿಸಿಕೊಂಡರು.


Spread the love

About Laxminews 24x7

Check Also

ದುರ್ಗಾದೇವಿ ಮಂಜುನಾಥ ದತ್ತ ಮಂದಿರ ಟ್ರಸ್ಟ್ ಜಾಂಬೋಟ್ಟಿಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಭಾಗಿ

Spread the love ದುರ್ಗಾದೇವಿ ಮಂಜುನಾಥ ದತ್ತ ಮಂದಿರ ಟ್ರಸ್ಟ್ ಜಾಂಬೋಟ್ಟಿಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ