ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಟ್ಟಿದ್ದ ಆರೋಪಿ ಮುಜಾಯಿದ್‍ನನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ವಾಟರ್ ಮ್ಯಾನ್ ಕೆಲಸ ಮಾಡ್ಕೊಂಡಿದ್ದ ಮುಜಾಯಿದ್, ಗಲಭೆ ದಿನ ನೂರಕ್ಕೂ ಹೆಚ್ಚು ಮಂದಿಯನ್ನು ಡಿಜೆ ಹಳ್ಳಿ ಠಾಣೆ ಬಳಿಯಿಂದ ಅಖಂಡ ಮನೆ ಬಳಿ ಕರೆದೊಯ್ದಿದ್ದ. ಇಷ್ಟು ದಿನ ಒಂದೊಂದು ದಿನ ಒಂದೊಂದು ಜಿಲ್ಲೆಯಲ್ಲಿ ತಲೆಮರೆಕೊಂಡಿದ್ದ ಎಂಬ ಮಾಹಿತಿ ಲಭಿಸಿದೆ.
ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಇಡಲು ಪ್ರಚೋದಿಸಿದ್ದ ಆರೋಪಿ, ಗಲಭೆ ಬಳಿಕ ಒಂದೊಂದು ದಿನ ಒಂದೊಂದು ಜಿಲ್ಲೆಯಲ್ಲಿ ತಲೆಮರೆಸಿಕೊಳ್ಳುತ್ತಿದ್ದ. ಸದ್ಯ ಆರೋಪಿಯನ್ನು ಬೆಂಗಳೂರಿನಲ್ಲೇ ಬಂಧಿಸಲಾಗಿದೆ. ನವೀನ್ ಮಾಡಿದ್ದ ಪೋಸ್ಟ್ ನೆಪವಾಗಿಸಿಕೊಂಡು ಪ್ರಚೋದಿಸಿ ಶಾಸಕರ ವಿರುದ್ಧ ಎಲ್ಲರೂ ಕೋಪಗೊಳ್ಳುವಂತೆ ಮಾಡಿದ್ದ. ಸಿಕ್ಕ ಸಿಕ್ಕ ವಸ್ತುಗಳನ್ನ ಧ್ವಂಸ ಮಾಡಿ, ಮನೆಗೆ ಬೆಂಕಿ ಹಚ್ಚಿ ಸ್ಥಳದಿಂದ ಎಸ್ಕೇಪ್ ಆಗಿದ್ದ.
ಘಟನೆಯ ಬಳಿಕ ವಾಟರ್ ಮುಜಾಯಿದ್ ಬಗ್ಗೆ ಅನುಮನ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಕೂಡ ವ್ಯಕ್ತಪಡಿಸಿದ್ದರು. ಕಳೆದ ಇಪ್ಪತ್ತೈದು ದಿನದಿಂದ ಮುಜಾಯಿದ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೋಲಾರ, ಮುಳಬಾಗಲು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೊಬೈಲ್ ಸ್ಚಿಚ್ ಆಪ್ ಮಾಡಿ ಒಂದೊಂದು ದಿನ ಸಂಬಂಧಿಕರ ಮನೆಯಲ್ಲಿ ಉಳಿಯುತ್ತಿದ್ದ. ಸದ್ಯ ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಬ್ಯುಸಿಯಾದ ಹಿನ್ನೆಲೆಯಲ್ಲಿ ನಮ್ಮನ್ನು ಮರೆತಿರುತ್ತಾರೆ ಎಂದು ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದ ಎನ್ನಲಾಗಿದೆ. ಆದರೆ ಆರೋಪಿ ಬಗ್ಗೆ ತೀವ್ರ ನಿಗಾ ವಹಿಸಿದ್ದ ಪೊಲೀಸರು ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ಸಂಬಂಧಿಕರ ಮನೆಯಲ್ಲಿದ್ದಾಗ ಆರೋಪಿಯನ್ನು ಬಂಧಿಸಿದ್ದಾರೆ.