ಬೆಂಗಳೂರು: 5 ಬಾರಿ ವಾರೆಂಟ್ ಜಾರಿಗೊಳಿಸ್ದದರೂ ಕೋರ್ಟ್ ಗೆ ಹಾಜರಾಗದಂತ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕ ( MLA Anil Benake ) ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ನ್ಯಾಯಾಲಯವು ಜಾರಿಗೊಳಿಸಿದೆ.
ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಲಯದ ನ್ಯಾಯಮೂರ್ತಿ ಜೆ ಪ್ರೀತ್ ಅವರು, ಶಾಸಕರಾಗಿ 5 ಬಾರಿ ವಾರೆಂಟ್ ಜಾರಿಗೊಳಿಸಿದ್ದರು ಅವರನ್ನು, ಕೋರ್ಟ್ ಗೆ ಹಾಜರುವಡಿಸಲು ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ವಿಫಲವಾಗಿದ್ದರು.
ಈ ಹಿನ್ನಲೆಯಲ್ಲಿ ಸಿಟ್ಟಾದಂತ ನ್ಯಾಯಾಮೂರ್ತಿಗಳು, ವಾರೆಂಟ್ ಜಾರಿಗೊಳಿಸಿದ್ದರು, ಶಾಸಕರನ್ನು ಕೋರ್ಟ್ ಗೆ ಹಾಜರುಪಡಿಸಿದಂತ ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರಿಗೂ ನೋಟಿಸ್ ಜಾರಿಗೊಳಿಸಿದ್ದಾರೆ. ಅಲ್ಲದೇ ಜೂನ್ 27ರೊಳಗಾಗಿ ಶಾಸಕ ಅನಿಲ್ ಬೆನಕೆ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ್ದಾರೆ.
ಅಂದಹಾಗೇ 2018ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬೆಳಗಾವಿಯ ಉತ್ತರ ಕ್ಷೇತ್ರದ ಶಾಸಕರಾಗಿರುವಂತ ಅನಿಲ್ ಬೆನಕೆ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿಯೇ ಈಗಾಗಲೇ 5 ಬಾರಿ ವಾರೆಂಟ್ ಜಾರಿಗೊಳಿಸಿದ್ದರು ಕೋರ್ಟ್ ಗೆ ಹಾಜರಾಗಿರಲಿಲ್ಲ. ಇದೀಗ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
Laxmi News 24×7