Breaking News

ವಿದ್ಯುತ್ ತಂತಿ ತಗುಲಿ 4 ವರ್ಷದ ಕಂದಮ್ಮ ಸಾವು…………………

Spread the love

ಹಾಸನ: ಅಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ 4 ವರ್ಷದ ಮಗು ಮೃತ ಪಟ್ಟಿರುವ ಮಲಕಲಕುವ ಘಟನೆ ನಡೆದಿದೆ.

ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಘಟನೆ ನೆಡೆದಿದ್ದು, ಸುಷ್ಮಿತಾ ಮತ್ತು ಪ್ರಕಾಶ್ ದಂಪತಿ ಪುತ್ರ ಧನುಷ್(4) ಸಾವನ್ನಪ್ಪಿದ ಬಾಲಕ. ದಂಪತಿಗೆ ಒಬ್ಬನೇ ಮಗನಾಗಿದ್ದು, ಇಂದು ಸಂಜೆ ಅಟವಾಡಲು ಮಹಡಿಯ ಮೇಲೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಮನೆಯ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿ ಅಕಸ್ಮಿಕವಾಗಿ ತಗುಲಿ ಮಗು ಸ್ಥಳದಲ್ಲೇ ಅಸುನಿಗಿದ್ದು, ಮಗುವನ್ನು ರಕ್ಷಿಸಲು ಬಂದ ಮನೆ ಮಾಲೀಕರಿಗೂ ವಿದ್ಯುತ್ ಶಾಕ್ ತಗುಲಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆ ಚಾವಣಿಯ ಮೇಲೆ 11ಕೆಬಿ ವಿದ್ಯುತ್ ಲೈನ್‍ನ್ನು ಅವೈಜ್ಞಾನಿಕವಾಗಿ ಹಾಕಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಜೊತೆಗೆ ವಿದ್ಯುತ್ ಕಂಬ ಒಂದೇ ಕಡೆಗೆ ಬಾಗಿದ್ದು, ಮನೆಯ ಮುಂದೆಯೇ ಕೈಗೆ ಸಿಗುವಂತೆ ವಿದ್ಯುತ್ ತಂತಿ ಹಾದು ಹೋಗಿದೆ. ಇದನ್ನು ಅರಿತ ಸ್ಥಳೀಯ ನಿವಾಸಿಗಳು ಹಲವು ಬಾರಿ ಕೆಇಬಿ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಸ್ಪಂದಿಸದ ಪರಿಣಾಮ, ಪುಟ್ಟ ಮಗುವಿನ ಸಾವಿಗೆ ಅಧಿಕಾರಿಗಳು ಕಾರಣವಾಗಿದರೆ ಎಂದು ಸ್ಥಳೀಯರು ದೂರಿದ್ದಾರೆ.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ