ಹಾವೇರಿ: ಯಾವುದೇ ಒಬ್ಬ ವ್ಯಕ್ತಿಗೆ ಮನುಷ್ಯತ್ವ, ತಾಯಿ ಹೃದಯವಿಲ್ಲದಿದ್ರೆ ಹುಟ್ಟಿಯೂ ಉಪಯೋಗವಿಲ್ಲ. ನಾನು ಜೀವನದಲ್ಲಿ ಎಂದೂ ಜಾತಿಯ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ ಎಂದು ರಟ್ಟಿಹಳ್ಳಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಒಂದು ಬಾರಿ ಅಧಿಕಾರ ಕೊಟ್ಟು ನೋಡಿ’: ರಾಜ್ಯದಲ್ಲಿ ಕೇವಲ ಮತಕ್ಕೋಸ್ಕರ ಹಲವು ಸಮಸ್ಯೆಗಳನ್ನು ಹುಟ್ಟು ಹಾಕಲಾಗ್ತಿದೆ. ಸಾಲಮನ್ನಾ ಮಾಡೋದು ಹೇಗೆ ಅನ್ನೋದನ್ನು ತೋರಿಸುವ ಉದ್ದೇಶದಿಂದ ನಾನು ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಈ ವರ್ಷದ ಕೊನೆಯಲ್ಲಿ ಚುನಾವಣೆ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಯಾವುದೇ ಪಕ್ಷದ ಹಂಗಿಲ್ಲದೆ ನಮಗೆ ಒಂದು ಬಾರಿ ಅಧಿಕಾರ ಕೊಟ್ಟು ನೋಡಿ ಎಂದು ಅವರು ಮನವಿ ಮಾಡಿದರು.
ಪ್ರತಿ ಕುಟುಂಬಕ್ಕೆ ಒಂದು ಮನೆ, ಉದ್ಯೋಗ ಸಿಗುವಂತೆ ಮಾಡುತ್ತೇನೆ. ನಾನು ಹದಿನಾಲ್ಕು ತಿಂಗಳು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಪ್ರಕೃತಿ ವಿಕೋಪವಾಗಿ ಕುಟುಂಬಗಳು ಬೀದಿಗೆ ಬಂದವು. ಆಗ ಅವರಿಗೆ ಮನೆ ಕಟ್ಟಿ ಕೊಟ್ಟೆವು. ಬಿಜೆಪಿಯವರು ನಮ್ಮ ಸರ್ಕಾರ ತೆಗೆದರು. ನನಗೆ ಅದರ ಬಗ್ಗೆ ಬೇಜಾರಿಲ್ಲ ಎಂದರು.
Laxmi News 24×7