ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಪಾಸಿಟಿವ್ ಕೇಸ್‍ಗಳ ಸಂಖ್ಯೆ 6 ಸಾವಿರ ದಾಟಿದ್ದು, ಸಾವಿನ ಸಂಖ್ಯೆಯೂ ಎಂದಿನಂತೆ ಶತಕ ದಾಟಿದೆ. ಚೇತರಿಕೆ ಪ್ರಮಾಣವೂ ಹೆಚ್ಚುತ್ತಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ ರಾಜ್ಯದಲ್ಲಿ ಇಂದು 6,495 ಹೊಸ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, 7,238 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. 113 ಮಂದಿ ಸೋಂಕಿಗೆ ಬಲಿಯಾಗಿದ್ದು, 747 ಮಂದಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 3,42,423ಕ್ಕೇರಿದೆ. ಒಟ್ಟು ಸಾವಿನ ಸಂಖ್ಯೆ 5,702ಕ್ಕೇರಿದೆ. ಇದುವರೆಗೂ 2,49,467 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1,862 ಹೊಸ ಸೋಂಕಿನ ಪ್ರಕರಣಗಳು ಇಂದು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,27,336ಕ್ಕೇರಿದೆ. 2,422 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. 90,043 ಸೋಂಕಿತ ಪ್ರಕರಣಗಳು ಸಕ್ರಿಯವಾಗಿದೆ.
ಉಳಿದಂತೆ ಬಾಗಲಕೋಟೆ 172, ಬಳ್ಳಾರಿ 365, ಬೆಳಗಾವಿ 154, ಚಿಕ್ಕಮಗಳೂರಿನಲ್ಲಿ 100, ಚಿತ್ರದುರ್ಗ 286, ದಕ್ಷಿಣ ಕನ್ನಡ 270, ದಾವಣಗೆರೆ 257, ಧಾರವಾಡ 279, ಗದಗ 178, ಹಾಸನ 217, ಕಲಬುರಗಿ 161, ಕೊಪ್ಪಳ 200, ಮಂಡ್ಯ 159, ಮೈಸೂರು 405, ರಾಯಚೂರು 140, ಶಿವಮೊಗ್ಗ 168, ತುಮಕೂರು 316, ಯಾದಗಿರಿ ಜಿಲ್ಲೆಯಲ್ಲಿ 122, ವಿಜಯಪುರ 84, ಉತ್ತರ ಕನ್ನಡ 86, ಉಡುಪಿ 83, ರಾಮನಗರ 69, ಕೋಲಾರ 60, ಕೊಡಗು 17, ಹಾವೇರಿ 63, ಬೀದರ್ 30, ಚಾಮರಾಜನಗರ 51, ಚಿಕ್ಕಬಳ್ಳಾಪುರ 68, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 73 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.