Breaking News

ಬೊಮ್ಮಾಯಿ ವಿರುದ್ಧ ಡಿಕೆಶಿ ಕಿಡಿ

Spread the love

ಬೆಂಗಳೂರು: ಜನಸ್ನೇಹಿ ಪೊಲೀಸರು ಧನದಾಹಿಗಳಾಗಿದ್ದಾರೆ, ಫಿಕ್ಸಿಂಗ್‌, ಮಾಮೂಲಿ ವಸೂಲಿ ಸೌಖ್ಯವಾಗಿ ನಡೆಯುತ್ತಿದೆ. ಇಷ್ಟು ಒಳ್ಳೆಯ ಆಡಳಿತವನ್ನು ನಿಮ್ಮನ್ನು ಬಿಟ್ರೆ ಇನ್ಯಾರು ಕೊಡ್ತಾರೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.

 

ಪೊಲೀಸ್ ಇಲಾಖೆಯ ‘ವರ್ಗಾವಣೆ ದಂಧೆ’ ಕುರಿತು ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ‘ಕಾಸು ಕೊಟ್ಟರಷ್ಟೇ ಪೊಲೀಸ್‌ ಬಾಸ್’ ವರದಿಯನ್ನು ಉಲ್ಲೇಖಿಸಿ ಶಿವಕುಮಾರ್ ಟ್ವೀಟ್‌ ಮಾಡಿದ್ದಾರೆ.

‘ಅಭಿನಂದನೆಗಳು ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಅದರಲ್ಲೂ ಗೃಹ ಇಲಾಖೆಯ ದಕ್ಷತೆ ಬಗ್ಗೆ ದಿನಪತ್ರಿಕೆಯಲ್ಲಿ ಹಾಡಿ ಹೊಗಳಲಾಗಿದೆ. ಜನಸ್ನೇಹಿ ಪೊಲೀಸರು ಧನದಾಹಿಗಳಾಗಿದ್ದಾರೆ, ಫಿಕ್ಸಿಂಗ್‌, ಮಾಮೂಲ್‌ ವಸೂಲಿ ಸೌಖ್ಯವಾಗಿ ನಡೆಯುತ್ತಿದೆ. ಇಷ್ಟು ಒಳ್ಳೆಯ ಆಡಳಿತವನ್ನು ನಿಮ್ಮನ್ನು ಬಿಟ್ರೆ ಇನ್ಯಾರು ಕೊಡ್ತಾರೆ? ಬಿಜೆಪಿಯವರೇ ಇದಕ್ಕೇನಂತೀರಿ?’ ಎಂದು ಸಿಎಂ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ತುರ್ತುಪರಿಸ್ಥಿತಿ ವೇಳೆ ಕಾಂಗ್ರೆಸ್‌ ವಿರೋಧಿಸಿದ್ದ ಸಿದ್ದರಾಮಯ್ಯರಿಂದ ಮಾಧ್ಯಮಗಳ ನಿರ್ಬಂಧ ಸರಿಯಲ್ಲ: ಅಶೋಕ್‌ ಆಕ್ಷೇಪ

Spread the loveಬೆಂಗಳೂರು: ಎಮರ್ಜೆನ್ಸಿ ಸಮಯದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹಾಕಿದ್ದಾಗ, ಇದೇ ಸಿದ್ದರಾಮಯ್ಯ  ಅಂದಿನ ಕಾಂಗ್ರೆಸ್ ಸರ್ಕಾರವನ್ನ ವಿರೋಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ