Breaking News

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವೆರಿ ಗುಡ್ ಎಂದ ಸಿದ್ದರಾಮಯ್ಯ

Spread the love

ಬೆಂಗಳೂರು: ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವೆರಿ ಗುಡ್ ಹೇಳಿದ್ದಾರೆ.

ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪ್ರಶ್ನೋತ್ತರ ಕಲಾಪದ ಬಳಿಕ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ಕೊಟ್ಟಿದ್ದೇನೆ ಎಂದು ತಿಳಿಸಿದರು. ಆಗ ಸಿದ್ದರಾಮಯ್ಯ ಅವರು, ಸ್ಪೀಕರ್‌ಗೆ ವೆರಿ ಗುಡ್.. ಗುಡ್ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ನನಗೆ ನೀವು ಗುಡ್ ಅನ್ನಲೇಬೇಕು ಅಲ್ಲವಾ ಎಂದು ತಮಾಷೆ ಮಾಡಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಹೌದು.. ಹೌದು ಯು ಆರ್ ಮೈ ಗುಡ್ ಫ್ರೆಂಡ್ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಲು ಎದ್ದ ವೇಳೆ ಕಂದಾಯ ಸಚಿವ ಅಶೋಕ್ ಸದನದಿಂದ ಹೊರ ನಡೆಯಲು ಮುಂದಾದರು. ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ಎ.ಮುನಿರತ್ನ, ಅಶೋಕ್ ಕೂತ್ಕೊಳ್ರಪ್ಪ ಎಂದು ತಿಳಿಸಿದ್ದಾರೆ. ಇದಕ್ಕೆ ಅಶೋಕ್ ನಾನು ನೀರು ಕುಡಿಯೋಕೆ ಹೋಗ್ತಿದ್ದೇನೆ ಎಂದು ಉತ್ತರಿಸಿದರು. ಆಗ ಸಿದ್ದರಾಮಯ್ಯ ಅವರು ಇಲ್ಲಿಗೇ ನೀರು ಕೊಡ್ತಾರೆ ಕೂತ್ಕೊಳಪ್ಪ ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು ಈ ರೀತಿ ಹೇಳುತ್ತಲೇ ಅಲ್ಲೇ ಅಶೋಕ್ ಕುಳಿತಿದ್ದಾರೆ. 


Spread the love

About Laxminews 24x7

Check Also

ತುರ್ತುಪರಿಸ್ಥಿತಿ ವೇಳೆ ಕಾಂಗ್ರೆಸ್‌ ವಿರೋಧಿಸಿದ್ದ ಸಿದ್ದರಾಮಯ್ಯರಿಂದ ಮಾಧ್ಯಮಗಳ ನಿರ್ಬಂಧ ಸರಿಯಲ್ಲ: ಅಶೋಕ್‌ ಆಕ್ಷೇಪ

Spread the loveಬೆಂಗಳೂರು: ಎಮರ್ಜೆನ್ಸಿ ಸಮಯದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹಾಕಿದ್ದಾಗ, ಇದೇ ಸಿದ್ದರಾಮಯ್ಯ  ಅಂದಿನ ಕಾಂಗ್ರೆಸ್ ಸರ್ಕಾರವನ್ನ ವಿರೋಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ