ದೇವರ ಫೋಟೋ ತೆಗೆದು, ಕಾಲಿಗೆ ನಮಸ್ಕರಿಸಿದ ಕಳ್ಳ
ಮಹಾರಾಷ್ಟ್ರದ ಥಾಣೆಯ ಖೋಪಾಟ್ ಬಸ್ ಡಿಪೋ ಬಳಿಯಿರುವ ಆಂಜನೇಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಯುವಕನೊಬ್ಬ ದೇಗುಲಕ್ಕೆ ಎಂಟ್ರಿಯಾಗುತ್ತಾನೆ. ಯಾರಿಗೂ ಅನುಮಾನ ಬರದಂತೆ ತನ್ನ ಮೊಬೈಲ್ ಕ್ಯಾಮರಾದಲ್ಲಿ ದೇವರ ಫೋಟೋಗಳನ್ನು ತೆಗೆಯುತ್ತಾನೆ. ಅತ್ತ ಇತ್ತ ನೋಡುತ್ತಾನೆ. ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ನಂತರ ಆಂಜನೇಯನ ವಿಗ್ರಹದ ಬಳಿ ಬರುತ್ತಾನೆ. ನಂತರ ದೇವರ ಪಾದ ಮುಟ್ಟಿ ನಮಸ್ಕರ ಮಾಡುತ್ತಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದ ಸಣ್ಣ ಹುಂಡಿಯೊಂದನ್ನು ಕದ್ದು ಓಡಿಹೋಗುತ್ತಾನೆ.
ಇದನ್ನು : ಹಸಿದವನಿಗೆ ಸಹಾಯ ಮಾಡಿದ ಸಿಂಗರ್: ಈಕೆಗೂ ಕಾದಿತ್ತು ಅಚ್ಚರಿ! ಆಮೇಲೆ ಏನಾಯ್ತು?
ಪೂಜಾರಿ ಹೊರಗಡೆ ಹೋಗಿದ್ದಾಗ ಕಳ್ಳತನ
ಈ ದೇಗುಲದಲ್ಲಿ ಸದಾ ಪೂಜಾರಿಯೊಬ್ಬರು ಇರುತ್ತಿದ್ದರು. ಆದರೆ ಯಾವುದೋ ಕೆಲಸದ ನಿಮಿತ್ತ ನಿಮಿಷ ಹೊರಗಡೆ ಹೋಗಿದ್ದಾರೆ. ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಯುವಕ, ದೇಗಲಕ್ಕೆ ಬಂದು ತನ್ನ ಕೈಚಳಕ ತೋರಿದ್ದಾನೆ. ಆ ಹುಂಡಿಯಲ್ಲಿ ಅಂದಾಜು 1 ಸಾವಿರ ರೂಪಾಯಿ ಇತ್ತು ಅಂತ ಪೂಜಾರಿ ಪೊಲೀಸರ ಬಳಿ ಹೇಳಿದ್ದಾರೆ. ಇನ್ನೂ ಈ ಹುಂಡಿ ಕದಿಯಲು ಬಂದಿದ್ದು ಇಬ್ಬರು. ಒಬ್ಬ ಹುಂಡಿ ಕದ್ದವ. ಮತ್ತೊಬ್ಬ ದೇಗುಲದ ಹೊರಗಡೆ ನೋಡಿಕೊಳ್ಳುತ್ತಿದ್ದ ಆರೋಪಿ. ಇಬ್ಬರೂ ಪ್ಲ್ಯಾನ್ ಮಾಡಿ ದೇಗುಲದ ಹುಂಡಿ ಕದ್ದಿದ್ದಾರೆ.
ಸಿಸಿಟಿವಿ ವಿಡಿಯೋ ತೋರಿಸಿ ಕಳ್ಳರನ್ನು ಹಿಡಿದ ಖಾಕಿ
ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋವನ್ನೇ ಪೊಲೀಸರು ಆ ಊರಿನ ಜನರಿಗೆ ತೋರಿಸಿ ಕಳ್ಳರ ಮಾಹಿತಿ ಕಲೆಹಾಕಿದ್ದಾರೆ. ಕಳ್ಳರು ಅದೇ ಗ್ರಾಮದವರು ಎಂದು ತಿಳಿದು ಬಂದಿದೆ. ಇಬ್ಬರನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ತಾವು ಹಣ ಕದ್ದಿರುವುದು ತಪ್ಪು ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕಳ್ಳನ ದೈವ ಭಕ್ತಿ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ‘ಕಳ್ಳತನಕ್ಕೂ ಮುನ್ನ ದೇವರ ವಿಗ್ರಹ ಮುಟ್ಟಿ ನಮಸ್ಕರಿಸಿದ್ದು, ನಿಜಕ್ಕೂ ಸೂಪರ್, ಆದರೆ ಒಂದು ಸಾವಿರ ರೂಪಾಯಿಗೆ ಹುಂಡಿ ಕದ್ದಿದ್ದು ತಪ್ಪು. ಅದರ ಬದಲು ಒಂದು ದಿನ ಕೂಲಿ ಕೆಲಸ ಮಾಡಿದ್ದರೆ ಸಾವಿರ ರೂಪಾಯಿ ದುಡಿಯಬಹುದಿತ್ತು’ ಅಂತ ಕಮೆಂಟ್ ಮಾಡಿದ್ದಾರೆ

Laxmi News 24×7