ಬೆಂಗಳೂರಿನ (Bengaluru) ಕೆಲ ಭಾಗಗಳಲ್ಲಿ ಜಿಟಿ ಜಿಟಿ ಮಳೆ(Rainfall)ಯಾಗಲಿದೆ. ಕಳೆದ ಮೂನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಮಳೆ ಜೊತೆಗೆ ಶೀತಗಾಳಿ ಸಹ ಬೀಸುತ್ತಿರುವ ಪರಿಣಾಮ ಚಳಿ ಪ್ರಮಾಣ ಸಹ ಏರಿಕೆಯಾಗಿದೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ 19 ಮಿ.ಮೀ.ನಷ್ಟು ಮಳೆಯಾಗಿದೆ. ವಿಮಾನ ನಿಲ್ದಾಣ ಭಾಗದಲ್ಲಿ 10.4 ಮಿ.ಮೀ., ಹೆಚ್ಎಎಲ್ ನಲ್ಲಿ 15.6 ಮಿ.ಮೀ.ನಷ್ಟು ಮಳೆಯಾಗಿದೆ. ಇಂದು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಬಂಗಾಳ ಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತ ಹಿನ್ನೆಲೆ ಇವತ್ತು ಸಹ ಬೆಂಗಳೂರಿನಲ್ಲಿ (Bengaluru Rains) ಮೋಡ ಕವಿದ ವಾತಾವರಣ (Cloudy Weather) ನಿರ್ಮಾಣವಾಗಲಿದೆ. ಬುಧವಾರದವರೆಗೂ ಬೆಂಗಳೂರಿನಲ್ಲಿ ಮಳೆಯಾಗಲಿದ್ದು, ತುಂತುರು ಮಳೆಯ ಜೊತೆ ಚಳಿ ಸಹ ಏರಿಕೆಯಾಗುತ್ತಿದೆ.
