Breaking News

ಇಂದಿನಿಂದ ಶಾಲೆಗಳಲ್ಲಿ ಮತ್ತೆ ಚಿಣ್ಣರ ಚಿಲಿಪಿಲಿ ಶುರು

Spread the love

ಬೆಂಗಳೂರು: ಎರಡು ವರ್ಷಗಳ ನಂತರ ಇಂದು ಪುಟಾಣಿಗಳು ಶಾಲೆಗೆ ತೆರಳುತ್ತಿದ್ದಾರೆ. ಮನೆಯನ್ನೇ ಶಾಲೆಯನ್ನಾಗಿಸಿಕೊಂಡಿದ್ದ ಚಿಣ್ಣರಿಗೆ ಈಗ ಶಾಲೆಗೆ ಹೋಗೋ ಕಾಲ ಬಂದಿದೆ. ಇಂದಿನಿಂದ ಅಂಗನವಾಡಿ(Anganwadi), LKG, UKG ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಲಿದ್ದಾರೆ. ಹೀಗಾಗಿ ಮಕ್ಕಳನ್ನು ಸ್ವಾಗತಿಸುವುದಕ್ಕೆ ಶಾಲೆಗಳು ಸಜ್ಜಾಗಿವೆ. ಚಿಣ್ಣರನ್ನು ವೆಲ್ ಕಮ್ ಮಾಡಲು ಶಾಲೆಯ ಆವರಣವನ್ನ ಹೂವು ಬಲೂನ್ಗಳಿಂದ ಶೃಂಗರ ಮಾಡಲಾಗಿದೆ.

ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳನ್ನ ವೆಲ್ ಕಮ್ ಮಾಡಲು ಶಾಲೆಗಳ ಆವರಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಾಲೆಗಳು ಮಕ್ಕಳಿಗೆ ಆಕರ್ಷವಾಗುವಂತಹ ರೀತಿಯಲ್ಲಿ ಶಾಲೆಗಳನ್ನು ಸಜ್ಜುಗೊಳಿಸಿದ್ದಾರೆ. ಶಾಲೆಯ ಆವರಣವನ್ನ ಹೂವು ಬಲೂನ್ಗಳಿಂದ ಸಿಂಗರಿಸಿದ್ದಾರೆ. ಮಲ್ಲೇಶ್ವರಂನ ಬಿಇಎಸ್ ಶಾಲೆಯಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಗ್ರ್ಯಾಂಡ್ ವೆಲ್ ಕಮ್ ಮಾಡಲಾಗುತ್ತಿದೆ. ಶಾಲೆಯ ಎಂಟ್ರಿಗೆ ಬಾಳೆ ಕಂಬ, ಕಲರ್ ಕಲರ್ ಬಲೂನ್. ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದೆ. ಇನ್ನು ಕೆಲ ಶಾಳೆಗಳಲ್ಲಿ ಮಕ್ಕಳಿಗೆ ಇಷ್ಟವಾಗೋ ಗೊಂಬೆ, ಮಕ್ಕಳ ಆಟದ ಸಾಮಾಗ್ರಿಗಳನ್ನ ಇಟ್ಟು ಸ್ವಾಗತ ಮಾಡಲಾಗುತ್ತಿದೆ.

ಇಂದಿನಿಂದ ಶಾಲೆಗಳಲ್ಲಿ ಮತ್ತೆ ಚಿಣ್ಣರ ಚಿಲಿಪಿಲಿ ಶುರು
ರಾಜ್ಯದಲ್ಲಿ ಕೊರೊನಾ ಸೋಂಕು ಸದ್ಯಕ್ಕೆ ಇಳಿಕೆಯಾಗಿದ್ರಿಂದ, ರಾಜ್ಯದಲ್ಲಿ LKG, UKG ಹಾಗೂ ಅಂಗನವಾಡಿ ಕೇಂದ್ರಗಳು ಓಪನ್ ಆಗ್ತಿವೆ. ಚಿಣ್ಣರನ್ನ ಶಾಲೆಗೆ ವಾಪಸ್ ಕರೆದಿರೋ ಸರ್ಕಾರ, ಅವರ ಆರೋಗ್ಯದ ರಕ್ಷಣೆಗಾಗಿ ಸಾಕಷ್ಟು ಕಠಿಣ ನಿಯಮಗಳನ್ನ ಹೊರಡಿಸಿದೆ. ಟೈಟ್ ರೂಲ್ಸ್ ಪಾಲನೆಯೊಂದಿಗೆ ಪುಟಾಣಿಗಳ ಶಾಲೆ ಶುರುವಾಗುತ್ತಿದೆ.

ಚಿಣ್ಣರಿಗೆ ‘ಗೈಡ್’ಲೈನ್ಸ್
ಎಲ್ಕೆಜಿ ಮತ್ತು ಯುಕೆಜಿ ಕೇಂದ್ರವನ್ನ ಮೊದಲು ಸ್ವಚ್ಛಗೊಳಿಸಬೇಕು. ರಾಸಾಯನಿಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಬೇಕು. ಮಕ್ಕಳು ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿರಬೇಕು. ಪೋಷಕರಿಗೂ 2 ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿ ತೆಗೆದುಕೊಂಡಿರಬೇಕು. ಕೊರೊನಾ ಲಕ್ಷಣವಿರುವ ಮಕ್ಕಳು ಶಾಲೆಗೆ ಬರುವಂತಿಲ್ಲ.

ಚಿಣ್ಣರ ಕೇಂದ್ರ ಆರಂಭವಾದವಾದ್ರು ಪೂರ್ಣಾವಧಿಯಾಗಿ ಶಾಲೆ ನಡೆಯಲ್ಲ. 2 ವರ್ಷದಿಂದ ಪುಟಾಣಿಗಳು ಶಾಲೆಯಿಂದ ದೂರ ಇದ್ದಾರೆ. ಹೀಗಾಗಿ, ಏಕಾಏಕಿಯಾಗಿ ಶಾಲೆಗೆ ಬಂದು ದಿನವಿಡೀ ಕೂರೋದು ಮಕ್ಕಳಿಗೆ ಕಷ್ಟವಾಗಬಹುದು. ಹೀಗಾಗಿ, ಆರಂಭದಲ್ಲಿ ಮಕ್ಕಳಿಗೆ ಅರ್ಧ ದಿನ ಅಂದ್ರೆ ಮಧ್ಯಾಹ್ನದ ವರೆಗೆ ಮಾತ್ರ ತರಗತಿ ಇರಲಿದೆ. ಮಕ್ಕಳು ಶಾಲೆ ವಾತಾವರಣಕ್ಕೆ ಹೊಂದಿಕೊಂಡ ಬಳಿಕ ಪೂರ್ಣಾವಧಿಯಾಗಿ ಕೇಂದ್ರಗಳು ನಡೆಯಲಿದೆ. ಇನ್ನು ಎಲ್ ಕೆಜಿ, ಯುಕೆಜಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನ ಕಳಿಸಲು ಒಂದೆಡೆ ಸಂತಸ ಇದ್ರೆ, ಪೋಷಕರಿಗೆ ಆತಂಕವೂ ಇದೆ.


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ