Breaking News

ಊಟ ತರಲು ಹೋದ ಮಗ ವಾಪಸ್ ಮನೆಗೆ ಬರಲೇ ಇಲ್ಲ; ಬೆಳಗ್ಗೆ ಬಾಗಿಲಲ್ಲಿ ಶವವಾಗಿ ಪತ್ತೆ

Spread the love

ಆನೇಕಲ್ : ಆತ ಅಪ್ಪ ನೀನು ಮನೆಯಲ್ಲಿಯೇ ಇರು ಊಟ (Food) ತರುತ್ತೇನೆ ಎಂದು ಮನೆಯಿಂದ ಹೊರ ಹೋದವನು ತಡರಾತ್ರಿಯಾದರೂ (Mid Night) ವಾಪಸ್ ಆಗಿರಲಿಲ್ಲ. ಮಗನ ಬರುವಿಕೆಯಲ್ಲಿಯೇ ಕಾದು ಕಾದು ಅಪ್ಪ(Father)  ನಿದ್ರೆಗೆ ಜಾರಿದ್ದಾನೆ. ಆದ್ರೆ ಮುಂಜಾನೆ ಹೊತ್ತಿಗೆ ಅಪ್ಪನಿಗೆ ಶಾಕ್ ಕಾದಿತ್ತು.

ಮನೆಯ ಮುಂಭಾಗದಲ್ಲಿಯೇ ರಕ್ತದ ಮಡುವಿನಲ್ಲಿ ಮಗನ ಶವ (Dead Body) ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.  ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ (Anekal Taluk) ದಾಸನಪುರ ವಾಸಿ ಸುರೇಶ್ ತನ್ನ ಮನೆಯ ಮುಂಭಾಗದಲ್ಲಿಯೇ ನವೆಂಬರ್ 6 ನೇ ತಾರೀಖು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಕೇವಲ 22 ವರ್ಷ ವಯಸ್ಸಿನ ಯುವಕ  ಶ್ರೀನಿವಾಸ್ ಎಂಬ ಹೂವಿನ ವ್ಯಪಾರಿ ಬಳಿ ಕೆಲಸ ಮಾಡಿಕೊಂಡಿದ್ದ.

ಆದ್ರೆ ಶನಿವಾರ ಮುಂಜಾನೆ ಮನೆಯ ಮುಂಭಾಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.


Spread the love

About Laxminews 24x7

Check Also

ದುರ್ಗಾದೇವಿ ಮಂಜುನಾಥ ದತ್ತ ಮಂದಿರ ಟ್ರಸ್ಟ್ ಜಾಂಬೋಟ್ಟಿಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಭಾಗಿ

Spread the love ದುರ್ಗಾದೇವಿ ಮಂಜುನಾಥ ದತ್ತ ಮಂದಿರ ಟ್ರಸ್ಟ್ ಜಾಂಬೋಟ್ಟಿಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ