ಬೆಂಗಳೂರು : ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂದಿನಿಂದ ಹೋಟೆಲ್ ಊಟ, ತಿಂಡಿಗಳು ದುಬಾರಿಯಾಗಲಿವೆ.
ಇಂಧನ ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ಮುಂದಾಗಿರುವಂತ ಹೋಟೆಲ್ ಮಾಲೀಕರ ಸಂಘವು ಇಂದಿನಿಂದ ಹೋಟೆಲ್ ಖಾದ್ಯಗಳ ಬೆಲೆ ಏರಿಕೆಯನ್ನು ( Hotel Food Price Hike ) ಮಾಡೋದಕ್ಕೆ ಮುಂದಾಗಿದೆ.
ಇದಕ್ಕೆ ಕಾರಣ ಒಂದೆಡೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಾದ್ರೇ.. ಮತ್ತೊಂದೆಡೆ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ. ಮಗದೊಂದೆಡೆ ಅಡುಗೆ ಎಣ್ಣೆ ದುಬಾರಿ. ಈ ಎಲ್ಲಾ ಕಾರಣದಿಂದಾಗಿ ನಾಳೆಯಿಂದ ಹೋಟೆಲ್ ತಿಂಡಿ-ಊಟದ ಬೆಲೆ ಏರಿಕೆಯಾಗಿ, ಗ್ರಾಹಕರ ಜೇಬಿಗೆ ಬರೆ ಬೀಳಲಿದೆ.
ಕರ್ನಾಟಕ ರಾಜ್ಯ ಹೊಟೆಲ್ ಗಳ ಸಂಘ ಇಡ್ಲಿ, ಪೂರಿ, ಪೊಂಗಲ್, ಪಲಾವ್, ಟೊಮ್ಯಾಟೊ ಬಾತ್, ಮಸಾಲೆ ದೋಸೆ, ಈರುಳ್ಳಿ ದೋಸೆ,ಊಟ, ಅನ್ನ ಸಾರು ಸೇರಿ ವಿವಿಧ ಬಗೆಯ ಊಟ, ತಿಂಡಿಗಳ ಮೇಲೆ 5 ರೂ. ಹಾಗೂ ಮಿನಿ ಕಾಫಿ ಸೇರಿ ಸಣ್ಣ ಪದಾರ್ಥಗಳ ಮೇಲೆ 1-2 .ರೂ ಹೆಚ್ಚಳ ಮಾಡಿದೆ.