Breaking News

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ಹೆಸ್ಕಾಂನಿಂದ 200 ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

ಹುಬ್ಬಳ್ಳಿ ವಿದ್ಯುತ್​ ಸರಬರಾಜು ನಿಗಮವು 2021ನೇ ಸಾಲಿನಲ್ಲಿ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಹೆಸ್ಕಾಂ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಅಕ್ಟೋಬರ್​ 20 ಕೊನೆಯ ದಿನಾಂಕವಾಗಿದೆ.‌

ಒಟ್ಟು 200 ಹುದ್ದೆಗಳಿಗೆ ಹೆಸ್ಕಾಂ ಅರ್ಜಿ ಆಹ್ವಾನ ಮಾಡಿದೆ. ಆಸಕ್ತ ಅಭ್ಯರ್ಥಿಗಳು hescom.co.in ಹಾಗೂ mhrdnats.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಇಚ್ಛಿಸುವವರು ಇಂಜಿನಿಯರಿಂಗ್​, ಬಿಇ ಅಥವಾ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು. 2019, 2020 ಹಾಗೂ 2021ನೇ ಸಾಲಿನಲ್ಲಿ ಈ ವಿಭಾಗಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ಅರ್ಹರಾಗಿರುತ್ತಾರೆ.

ಹೆಸ್ಕಾಂ ನೇಮಕಾತಿ 2021ರ ವಿವರ :

ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 2021, ಸೆಪ್ಟೆಂಬರ್​ 27

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 2021 ಅಕ್ಟೋಬರ್​ 20

ಅಭ್ಯರ್ಥಿಗಳನ್ನು ಶಾರ್ಟ್​ಲಿಸ್ಟ್​​ ಮಾಡುವ ದಿನಾಂಕ : 2021 ಅಕ್ಟೋಬರ್ 22

ಅರ್ಜಿ ಸಲ್ಲಿಸುವ ವಿಧಾನ :

mhrdnats.gov.in ಗೆ ಭೇಟಿ ನೀಡಿ

Enroll ಆಯ್ಕೆ ಮೇಲೆ ಕ್ಲಿಕ್​ ಮಾಡಿ. ಇದಾದ ಬಳಿಕ ಅರ್ಜಿಯನ್ನು ತುಂಬಬೇಕು . ಇದಾದ ಬಳಿಕ ಹೊಸ ಐಡಿಯೊಂದು ರಚನೆಯಾಗಲಿದೆ.

ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಗಳು ಕನಿಷ್ಟ 1 ದಿನವಾದರೂ ಕಾಯಬೇಕು.

ಇದಾದ ಬಳಿಕ ಲಾಗಿನ್​ ಆದ ಅಭ್ಯರ್ಥಿಗಳು ರೆಸ್ಯೂಮ್​ನ್ನು ಅಪ್​ಲೋಡ್ ಮಾಡಬೇಕು. ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿ ಲಿಮಿಟೆಡ್​ ಆಯ್ಕೆ ಮಾಡಿ. ಬಳಿಕ ಅಪ್ಲೈ ಆಯ್ಕೆ ಕ್ಲಿಕ್ಕಿಸಿ.

ಮುಂದಿನ ಬಳಕೆಗಾಗಿ ಅರ್ಜಿಯ ಕಾಪಿಯನ್ನು ಇಟ್ಟುಕೊಂಡಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಓದಲು ಹಾಗೂ ಬರೆಯಲು ಬರುವುದು ಕಡ್ಡಾಯವಾಗಿರಲಿದೆ. ಆನ್​ಲೈನ್​ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ 1 ವರ್ಷಗಳ ಕಾಲ ಅಪ್ರೆಂಟಿಸಿಶಿಪ್​ ತರಬೇತಿ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ವೆಬ್​ಸೈಟ್​ನ್ನು ಆಗಾಗ ಚೆಕ್​ ಮಾಡುತ್ತಿರುವುದು ಒಳ್ಳೆಯದು.


Spread the love

About Laxminews 24x7

Check Also

ಆರೋಪದಿಂದ ಹೊರಬರುವವರೆಗೂ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ವಿ.ಸೋಮಣ್ಣ

Spread the love ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನಿಗೆ ತಲೆ ಬಾಗುತ್ತಾರೆ ಎನ್ನುವ ವಿಶ್ವಾಸವಿದೆ. ರಾಜೀನಾಮೆ ನೀಡುವುದಿಲ್ಲ ಎಂದು ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ