ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾನೆ ಇದೆ. ಇದರ ಬೆನ್ನಲ್ಲೇ ಜನರನ್ನು ರಕ್ಷಣೆ ಮಾಡಬೇಕಾದ ಆರಕ್ಷಕರಿಗೆ ಕೊರೊನಾ ಪಾಸಿಟಿವ್ ಬರುತ್ತಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಇಲ್ಲಿವರೆಗೂ ಏಳು ಪೊಲೀಸ್ ಠಾಣೆಯ ಪೊಲೀಸ್ ಪೇದೆಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಮತ್ತಷ್ಟು ಆತಂಕಕ್ಕೆ ದೂಡಿದೆ. ನಗರದ ಬಂಡೇಪಾಳ್ಯ ಪೊಲೀಸ್ ಠಾಣೆ, ಜೆಜೆ ನಗರ ಪೊಲೀಸ್ ಠಾಣೆ, ಜೆಬಿ ನಗರ ಪೊಲೀಸ್ ಠಾಣೆ, ಡಿಜಿ ಅಂಡ್ ಐಜಿಪಿ ಕಚೇರಿ, ಫ್ರೇಜರ್ ಟೌನ್ ಪೊಲೀಸ್ ಠಾಣೆ, ಚಾಮರಾಜ ಪೇಟೆ ಸಿಎಆರ್ ಪೊಲೀಸ್ ಪೇದೆಗಳಿಗೆ ಪಾಸಿಟಿವ್ ಬಂದಿದೆ.
ಇತ್ತ ನಿನ್ನೆ ಹೆಣ್ಣೂರು ಪೊಲೀಸ್ ಠಾಣೆಯ ಕೋರ್ಟ್ ಬೀಟ್ ಪೊಲೀಸ್, ಶಂಕರ್ ಪುರಂ ಪೊಲೀಸ್ ಪೇದೆಗೂ ಕೊರೊನಾ ಪಾಸಿಟಿವ್ ಬಂದಿರುವುದು ಪೊಲೀಸ್ ವಲಯದಲ್ಲಿ ಆತಂಕ ಶುರುವಾಗುವಂತೆ ಮಾಡಿದೆ. ಬಹುತೇಕ ಎಲ್ಲ ಪೊಲೀಸ್ ಠಾಣೆಗಳನ್ನು ಕೂಡ ಸ್ಯಾನಿಟೈಜೇಶನ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಮಹಾಮಾರಿ ಯಾವೆಲ್ಲ ರೀತಿಯಲ್ಲಿ ರುದ್ರ ನರ್ತನ ಮಾಡುತ್ತದೆ ಎಂದು ಕಾದುನೋಡಬೇಕಿದೆ.