Breaking News

ಬೆಂಗಳೂರು:ಒಂದೇ ದಿನ 69,400 ರೂ. ದಂಡ ವಸೂಲಿ…….ಮಾಸ್ಕ್ ಧರಿಸದೇ ತಿರುಗಾಡುತ್ತಿದ್ದವರಿಗೆ ಬಿಸಿ

Spread the love

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆದೇಶ ಹೊರಡಿಸಿದೆ. ಆದರೂ ಬೆಂಗಳೂರಿನ ವಿವಿಧೆಡೆ ಅನೇಕರು ಮಾಸ್ಕ್ ಧರಿಸದೇ ರಸ್ತೆಗೆ ಇಳಿದು ದಂಡ ತೆತ್ತಿದ್ದಾರೆ.

ಬೆಂಗಳೂರು ಪೂರ್ವ, ಪಶ್ಚಿಮ, ದಕ್ಷಿಣ ವಲಯ, ಮಹಾದೇವಪುರ, ಆರ್.ಆರ್ ನಗರ, ಯಲಹಂಕ, ದಾಸರಹಳ್ಳಿ, ಬೊಮ್ಮನಹಳ್ಳಿ ಸೇರಿದಂತೆ ವಿವಿಧೆಡೆ ಇಂದು ಒಂದೇ ದಿನ 69,400 ರೂ. ದಂಡ ವಸೂಲಿ ಮಾಡಲಾಗಿದೆ. ಈ ಮೂಲಕ ಆದೇಶ ಮೀರಿ ಮಾಸ್ಕ್ ಧರಿಸದೇ ತಿರುಗಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಎಲ್ಲಿ, ಎಷ್ಟು ಹಣ ವಸೂಲಿ?:
ಬೆಂಗಳೂರು ಪೂರ್ವ ವಲಯದಲ್ಲಿ 66 ಕೇಸ್‍ಗಳು ದಾಖಲಾಗಿದ್ದು, 13,200 ರೂ. ದಂಡ ವಸೂಲಿ ಮಾಡಲಾಗಿದೆ. ಅದರಂತೆ ಬೆಂಗಳೂರು ಪಶ್ಚಿಮ ವಲಯದಲ್ಲಿ 116 ಕೇಸ್, 23,200 ರೂ. ದಂಡ ಪಾವತಿಸಿಕೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ವಲಯದಲ್ಲಿ 115 ಕೇಸ್‍ಗಳು ದಾಖಲಾಗಿದ್ದು, 23,000 ರೂ. ದಂಡ ವಸೂಲಿಯಾಗಿದೆ.

ಮಹಾದೇವಪುರ ವಲಯದಲ್ಲಿ 20 ಪ್ರಕರಣಗಳು ದಾಖಲಾಗಿದ್ದು, 4,000 ರೂ. ದಂಡ ಪಾವತಿಸಿಕೊಳ್ಳಲಾಗಿದೆ. ಆರ್.ಆರ್.ನಗರ ವಲಯದಲ್ಲಿ 15 ಕೇಸ್‍ಗಳು ದಾಖಲಾಗಿದ್ದು, 3,000 ರೂ. ದಂಡ ವಸೂಲಿ ಮಾಡಲಾಗಿದೆ. ಯಲಹಂಕ ವಲಯದಲ್ಲಿ 6 ಕೇಸ್‍ಗಳು ದಾಖಲಾಗಿದ್ದು, 1,200 ರೂ. ಫೈನ್ ಪಡೆಯಲಾಗಿದೆ. ದಾಸರಹಳ್ಳಿ ವಲಯದಲ್ಲಿ 4 ಕೇಸ್ ಗಳು ದಾಖಲಾಗಿ 800 ರೂ. ದಂಡ ಪಡೆಯಲಾಗಿದೆ. ಬೊಮ್ಮನಹಳ್ಳಿ ವಲಯದಲ್ಲಿ 5 ಪ್ರಕರಣಗಳು ದಾಖಲಾಗಿ 1,000 ರೂ. ಫೈನ್ ವಸೂಲಿ ಮಾಡಲಾಗಿದೆ.


Spread the love

About Laxminews 24x7

Check Also

ವಿಧಾನಸಭೆಯ ಆವರಣದಲ್ಲಿನ ಚಿತ್ರಪಟಗಳ ಉದ್ಘಾಟನೆ ನೆರವೇರಿಸಿದ ಡಿಸಿಎಂ ಡಿ ಕೆ ಶಿವಕುಮಾರ್.

Spread the loveಬೆಂಗಳೂರು: ವಿಧಾನಸಭೆ ನಡೆದು ಬಂದ ದಾರಿ ಕುರಿತು ವಿಧಾನಸಭೆಯ ಹೊರ ಆವರಣದಲ್ಲಿ ಅಳವಡಿಸಲಾಗಿರುವ ಚಿತ್ರಪಟಗಳ ಉದ್ಘಾಟನೆಯನ್ನು ಡಿಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ