Breaking News

ಅಪ್ರಾಪ್ತ ಬಾಲಕಿ ವಿವಾಹಕ್ಕೆ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದ ಭೂಪ; ವರ ಮಹಾಶಯ ಅರೆಸ್ಟ್

Spread the love

ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಲು ವರ ಮಹಾಶಯನೊಬ್ಬ ಆಧಾರ್ ಕಾರ್ಡ್ ನ್ನೇ ನಕಲು ಮಾಡಿ ಸಿಕ್ಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಮದುಮಗ ಮನು ಎಂದು ಗುರುತಿಸಲಾಗಿದೆ. ಕಾನೂನು ಪ್ರಕಾರ ಯುವತಿಗೆ ವಿವಾಹವಾಗಲು 18 ವರ್ಷ ಆಗಿರಬೇಕು. ಆದರೆ ಮನು ಎಂಬ ಯುವಕ ಅಪ್ರಾಪ್ತ ಯುವತಿ ವಿವಾಹವಾಗಲೆಂದು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾನೆ.

ಯುವತಿಯ ಆಧಾರ್ ಕಾರ್ಡ್ ನಲ್ಲಿ ಆಕೆ ಹುಟ್ಟಿದ ದಿನಾಂಕ, ವರ್ಷವನ್ನೇ ಬದಲಿಸಿದ್ದಾನೆ. ಬಳಿಕ ಯುವತಿಯೊಂದಿಗೆ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ವಿವಾಹವಾಗಲು ನೋಂದಣಿಗಾಗಿ ದಾಖಲೆ ನೀಡಿದ್ದಾನೆ.  ಈ ವೇಳೆ ಆಧಾರ್ ಕಾರ್ಡ್ ನಲ್ಲಿ ಇಸವಿ ತಿದ್ದುಪಡಿ ಮಾಡಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ದೂರು ನೀಡಲಾಗಿದೆ.

ತನಿಖೆ ನಡೆಸಿದ ಪೊಲೀಸರುಗೆ ಯುವಕ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿದ್ದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ರಾಜಗೋಪಾಲನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಅಲ್ಪಸಂಖ್ಯಾತರಿಗೆ ವಸತಿ ಮೀಸಲಾತಿ ಹೆಚ್ಚಳ: ಸಿಎಂ ಸಮರ್ಥನೆ

Spread the loveಬೆಂಗಳೂರು: “ವಸತಿ ಮೀಸಲಾತಿ ಹೆಚ್ಚಳ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ