ಧಾರವಾಡ: ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಪ್ರಯಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ಸುಶೀಲವ್ವ ಹರಿಜನ, ಕಲ್ಲವ್ವ ಹರಿಜನ ಹಾಗೂ ರಾಜು ಎಂಬುವರು ಮೃತರು.
ಸುಶೀಲವ್ವ ಮತ್ತು ಕಲ್ಲವ್ಬ ಬೊಗೂರ ಗ್ರಾಮದವರಾಗಿದ್ದು, ರಾಜು ತಿಗಡೊಳ್ಳಿ ನಿವಾಸಿಯಾಗಿದ್ದಾರೆ. ಮೃತ ಮಹಿಳೆಯರು ಧಾರವಾಡಕ್ಕೆ ನೇರಳೆ ಹಣ್ಣು ಮಾರಲು ಬಂದಿದ್ದರು ಎನ್ನಲಾಗುತ್ತಿದೆ. ಕಾರಿನವರು ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
Laxmi News 24×7