ಚಾಮರಾಜನಗರ: ಕಾರಿನಲ್ಲಿ ಆನೆ ದಂತ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಂಚಾರಿ ಅರಣ್ಯ ದಳದ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಪ್ರೀತಮ್(31), ಜಗದೀಶ್(21), ಪುನೀತ್(28) ಬಂಧನಕ್ಕೆ ಒಳಗಾದರೆ ಹೇಮಂತ್ ಪರಾರಿಯಾಗಿದ್ದಾನೆ.
ಬೆಡ್ ಶಿಟ್‌ನಲ್ಲಿ ಆನೆ ದಂತ ಸುತ್ತಿಕೊಂಡು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಕಾರನ್ನು ಅಡ್ಡ ಹಾಕಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಆನೆ ದಂತ, ಕಾರು, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Laxmi News 24×7