Breaking News

ರಾಜ್ಯದಲ್ಲಿ ಅವದಿಗೂ ಮುನ್ನ ಚುನಾವಣೆ ಬಂದರೂ ಬರಬಹುದು;: ಸತೀಶ್​ ಜಾರಕಿಹೊಳಿ

Spread the love

ಬಾಗಲಕೋಟೆ: ಅಭ್ಯರ್ಥಿಗಳ ಘೋಷಣೆ: ಪಕ್ಷದಲ್ಲಿ ಬೇಗ ಅಭ್ಯರ್ಥಿಗಳ ಘೋಷಣೆ ಮಾಡಬೇಕೆನ್ನುವ ಒತ್ತಡ ಇದೆ. ಹೀಗಾಗಿ, ಖಂಡಿತ 6 ತಿಂಗಳ ಮೊದಲೇ ಘೋಷಣೆಯಾಗಬಹುದು. ರಾಜ್ಯದಲ್ಲಿ ಅವದಿಗೂ ಮುನ್ನ ಚುನಾವಣೆ ಬಂದರೂ ಬರಬಹುದು. ಯಾವುದಕ್ಕೂ ಪಕ್ಷ ಸಿದ್ದವಾಗಿರುತ್ತೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟ ಪಡಿಸಿದರು.

 

ಸ್ವಾಮೀಜಿಗಳಿಗೆ ಸಿದ್ದರಾಮಯ್ಯ ಅವಮಾನ ವಿಚಾರ: ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ ಏನು?

ಹಿಂದೂ ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುವಾಗ ಮುಸ್ಲಿಂ ಹೆಣ್ಣು ಮಕ್ಕಳು ತಲೆ ಮೇಲೆ ದುಪಟ್ಟಾ ಹಾಕಿಕೊಳ್ಳಬಾರದೇ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಈ ಬಗ್ಗೆ ನನಗೇನು ಗೊತ್ತಿಲ್ಲ. ವಿಚಾರ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.

ಹಿಂದೂ ದೇಗುಲದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಚಾರವಾಗಿ ಮಾತನಾಡಿ, ಇದೆಲ್ಲಾ ಯಶಸ್ವಿ ಆಗೋದಿಲ್ಲ. ಸಾವಿರಾರು ವರ್ಷಗಳಿಂದ ಎಲ್ಲರೂ ಸೇರಿ ವ್ಯಾಪಾರ ಮಾಡಿದ್ದಾರೆ. ಸುಮ್ಮನೆ ಈ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಅಷ್ಟೇ. ಯಾರೋ ಹೇಳ್ತಾರೆ ಅಂತ ಹಿಂದೂಗಳನ್ನಾಗಲಿ, ಮುಸ್ಲಿಂರನ್ನಾಗಲಿ ಹೊರ ಹಾಕಲು ಸಾಧ್ಯವಿಲ್ಲ. ಹರ್ಷನ ಹತ್ಯೆ ಆಯ್ತು, ಹಿಜಾಬ್​ ಆಯ್ತು, ಈಗ ಈ ವಿಷಯ ಇಟ್ಟುಕೊಂಡಿದ್ದಾರೆ. ಇವರಿಗೆ ತಿಂಗಳಿಗೊಂದು ವಿಷಯ ಬೇಕು. ಅದಕ್ಕೆ ಇಂತಹ ವಿಚಾರಗಳಲ್ಲಿ ಸಮಾಜದ ಶಾಂತಿ ಕದಡುತ್ತಾರೆ ಎಂದರು.


Spread the love

About Laxminews 24x7

Check Also

ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವ

Spread the love ಬೆಳಗಾವಿ: ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ