Breaking News

B.S.Y. ಸಂಪುಟಕ್ಕೆ ಹೊಸ ಮಂತ್ರಿಗಳು ಸೇರ್ಪಡೆ ಹೈಕಮಾಂಡ್ ಅನುಮತಿ ಸೂಚಿಸಿದರೆ ,ಹಿರಿಯರಿಗೆ ಕೊಕ್ ….!

Spread the love

ಬೆಂಗಳೂರು: ಹೈಕಮಾಂಡ್ ಅನುಮತಿ ನೀಡಿದರೆ ದೀಪಾವಳಿಯ ನಂತರ ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟಕ್ಕೆ ಹೊಸ ಮಂತ್ರಿಗಳು ಸೇರ್ಪಡೆಯಾಗಲಿದ್ದಾರೆ. ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆಯೋ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಆದರೆ ಸಂಪುಟ ಪುನಾರಚನೆ ಮಾಡುವಂತೆ ಹೈಕಮಾಂಡ್ ಸೂಚಿಸಿದರೆ ಬಿಎಸ್‍ವೈ ಧರ್ಮಸಂಕಟಕ್ಕೆ ಸಿಲುಕಲಿದ್ದಾರೆ.

ಸಂಪುಟದಲ್ಲಿ ಹಿರಿಯ ಕುರ್ಚಿಗೆ ಕೈ ಹಾಕುವಂತಿಲ್ಲ. ಆದರೆ ಹಿರಿಯರನ್ನು ಬಿಟ್ಟುಬಿಡಿ ಎನ್ನುವುದು ಯಡಿಯೂರಪ್ಪನವರ ಪ್ಲ್ಯಾನ್. ಸಾಫ್ಟ್ ಸಚಿವರನ್ನು ಮಾತ್ರ ಸಂಪುಟದಿಂದ ಕೈಬಿಟ್ಟು ಜಾತಿ ಆಧಾರಿತ, ಪ್ರಾದೇಶಿಕ ಲೆಕ್ಕಾಚಾರ ಹಾಕಿ ಸಂಪುಟ ಪುನಾರಚನೆ ಮಾಡಲು ಬಿಎಸ್‍ವೈ ಮುಂದಾಗಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

ಹಿರಿಯರಿಗೆ ಕೊಕ್ ಕೊಡುವುದಾದರೆ `ಹೈ’ನಿಂದಲೇ ಲಿಸ್ಟ್ ರೆಡಿಯಾಗಬೇಕು. ಹೈಕಮಾಂಡ್ ಲಿಸ್ಟ್ ಕಳುಹಿಸಿದರೆ ಮಾತ್ರ ಹಿರಿಯರಿಗೆ ಕೊಕ್ ಕೊಡಬಹುದು. ಇಲ್ಲದಿದ್ದರೆ ಹಿರಿಯರ ಕೈಬಿಡುವ ಸಾಹಸಕ್ಕೆ ಯಡಿಯೂರಪ್ಪ ಕೈ ಹಾಕದೇ ಕಿರಿಯರು, ಸಾಫ್ಟ್ ಇರುವ ಸಚಿವರ ಕುರ್ಚಿಗೆ ಮಾತ್ರ ಹೈಹಾಕುವ ಸಾಧ್ಯತೆಯಿದೆ. ಸಂಪುಟ ಪುನಾರಚನೆಗಿಂತ ವಿಸ್ತರಣೆಯೇ ಸಾಕು ಅಂತಿದೆ ಬಿಜೆಪಿ ಮೂಲಗಳು.

ಈ ನಡುವೆ ಕೆಲ ಸಚಿವರಿಗೆ ಸಂಪುಟದಿಂದ ಔಟ್ ಆಗೋ ಟೆನ್ಶನ್ ಇದ್ದರೆ ಕೆಲ ಸಚಿವರು ಖಾತೆ ಬದಲಾವಣೆ ಮಾಡಲು ಬಯಸಿದ್ದಾರೆ. ಇದರ ಜೊತೆ ಕೆಲವರು ಹೆಚ್ಚುವರಿ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಒಂದೂವರೆ ವರ್ಷದಿಂದ ಕೆಲ ಸಚಿವರು ಬಯಸದ ಖಾತೆ ವಹಿಸಿಕೊಂಡಿದ್ದಾರೆ. ಈಗ ಸಂಪುಟ ಸರ್ಜರಿ ಹಿನ್ನೆಲೆಯಲ್ಲಿ ಹಿರಿಯ ಸಚಿವರು ಖಾತೆ ಬದಲಾವಣೆಗೆ ಮುಂದಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

 


Spread the love

About Laxminews 24x7

Check Also

ಪಂಚ ಗ್ಯಾರಂಟಿಗಳಿಗಾಗಿ ₹63 ಸಾವಿರ ಕೋಟಿ ಸಾಲ ಮಾಡಿದ ರಾಜ್ಯ ಸರ್ಕಾರ: ಸಿಎಜಿ ವರದಿ

Spread the love ಬೆಂಗಳೂರು: ಪಂಚ ಗ್ಯಾರಂಟಿಗಳಿಗಾಗಿ 2023-24 ಸಾಲಿನಲ್ಲಿ ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ 63 ಸಾವಿರ ಕೋಟಿ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ