ಚಿಕ್ಕೋಡಿ ಉಪವಿಭಾಗವೂ ಸೇರಿ ಹಲವೆಡೆ ಬೈಕ್ ಕಳ್ಳತನ ಮಾಡಿದ ಜಾಗನೂರಿನ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 5 ಬೈಕ್ ವಶಪಡಿಸಿಕೊಂಡಿದ್ದಾರೆ.
ಚಿಕ್ಕೋಡಿ, ಮಹಾಲಿಂಗಪುರ, ಉಳ್ಳಾಗಡ್ಡಿ ಖಾನಾಪುರ, ಅಂಕಲಗಿ, ಹುಕ್ಕೇರಿ ಕಡೆ ಬೈಕ್ ಕಳ್ಳತನ ಮಾಡಿದ ಆರೋಪದ ಮೇಲೆ ಚಿಕ್ಕೋಡಿ ತಾಲೂಕು ಜಾಗನೂರು ಗ್ರಾಮದ ರವಿ ಮಾರುತಿ ಗಣಾಚಾರ ಎಂಬ ಯುವಕನನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತನಿಂದ 1.15 ಲಕ್ಷ ರೂ ಮೌಲ್ಯದ 5 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಎಸ್‍ಐ ರಾಕೇಶ ಬಗಲಿ, ಸಿಬ್ಬಂದಿಗಳಾದ ಆರ್.ಎಸ್.ಮೂಡಲಗಿ, ಎಸ್.ಎಸ್.ಅರಭಾಂವಿ, ಜಿ.ಎಸ್.ಕಾಂಬಳೆ, ಎನ್.ಎಸ್.ಬಡಿಗೇರ, ಕೆ.ವಿ.ಚೆಲ್ಲಿಕೇರಿ, ಬಿ.ಎ.ಲಕ್ಕನ್ನವರ ಮತ್ತಿತರರನ್ನೊಳಗೊಂಡ ತಂಡದ ಸದಸ್ಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
Laxmi News 24×7