Breaking News
Home / new delhi / ಬ್ಯಾರಲ್‌ನಲ್ಲಿ ಹೋಗುತ್ತಿದ್ದವರ ನೆರವಿಗೆ ಬಂದ ಸಿಎಂ : ಸಿಕ್ತು ಬೋಟ್

ಬ್ಯಾರಲ್‌ನಲ್ಲಿ ಹೋಗುತ್ತಿದ್ದವರ ನೆರವಿಗೆ ಬಂದ ಸಿಎಂ : ಸಿಕ್ತು ಬೋಟ್

Spread the love

ಅಥಣಿ  : ಬೋಟ್‌ ಇಲ್ಲದೇ ಪ್ಲಾಸ್ಟಿಕ್‌ ಬ್ಯಾರೆಲ್‌ಗಳ ಮೇಲೆ ಕುಳಿತು ಪ್ರವಾಹದ ನೀರಿನಲ್ಲಿ ಸಾಗುತ್ತಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿಯಲ್ಲಿ ನೆರೆ ಸಂತ್ರಸ್ತರಿಗೆ (ಮಾಂಗ ವಸ್ತಿ ಜನರು) ಬೋಟ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಕೃಷ್ಣಾ ನದಿ ಪ್ರವಾಹದಿಂದಾಗಿ ಹುಲಗಬಾಳಿ ಜಲಾವೃತವಾಗಿತ್ತು. ಇಲ್ಲಿಯ ಮಾಂಗ ವಸ್ತಿ ಜನರು ಬೋಟ್‌ ಇಲ್ಲದೇ ಪ್ಲಾಸ್ಟಿಕ್‌ ಬ್ಯಾರೆಲ್‌ಗಳ ಮೂಲಕ ಪ್ರವಾಹದ ನೀರಿನಲ್ಲಿ ಸಾಗುತ್ತಿದ್ದರು. ಈ ಬಗ್ಗೆ ಸುವರ್ಣ ನ್ಯೂಸ್‌ ವರದಿ ಮಾಡಿತ್ತು. ಈ ವರದಿಯನ್ನು ಗಮನಿಸಿದ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಬೋಟ್‌ ವ್ಯವಸ್ಥೆ ಕಲ್ಪಿಸಲು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಸಿಎಂ ಆದೇಶದಂತೆ ಇದೀಗ ಅಲ್ಲಿಯ ಸಂತ್ರಸ್ತರಿಗೆ ಬೋಟ್‌ ವ್ಯವಸ್ಥೆ ಮಾಡಲಾಗಿದೆ.

ಸಚಿವರ ಕಾರ್ಯವೈಖರಿ ಮೇಲೆ ಪಕ್ಷ ನಿಗಾ, ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ…

 

ಜನರ ವಿರುದ್ಧ ತಹಸೀಲ್ದಾರ್‌ ಆಕ್ರೋಶ:

ಬೋಟ್‌ ಇಲ್ಲದೇ ನೆರೆ ಸಂತ್ರಸ್ತರು ಕಷ್ಟಪಡುತ್ತಿರುವ ಬಗ್ಗೆ ಸುವರ್ಣ ನ್ಯೂಸ್‌ನಲ್ಲಿ ವರದಿ ಬಂದಿರುವುದ್ದಕ್ಕೆ ತಹಸೀಲ್ದಾರ್‌ ದುಂಡಪ್ಪ ಕುಮಾರ ಅವರು ಅಲ್ಲಿಯ ಸಾರ್ವಜನಿಕರ ವಿರುದ್ಧ ನ್ಯೂಸ್‌ ಕೊಟ್ಟಿದ್ದು ಯಾರು? ನಿಮ್ಮ ಮೇಲೆ ಎಫ್‌ಐಆರ್‌ ಹಾಕಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗಲಭೆ: ಕಾಂಗ್ರೆಸ್‌ಗೆ ಸಿಎಂ ಯಡಿಯೂರಪ್ಪ ತಿರುಗೇಟು…

 

ಜಿಲ್ಲಾಧಿಕಾರಿಗಳು ಬೋಟ್‌ ವ್ಯವಸ್ಥೆ ಕಲ್ಪಿಸಲು ತಹಸೀಲ್ದಾರ್‌ಗೆ ಸೂಚಿಸಿದ್ದರೂ ವ್ಯವಸ್ಥೆ ಮಾಡಿರಲಿಲ್ಲ. ಈ ಸುದ್ದಿ ತಿಳಿದು ಚಿಕ್ಕೋಡಿ ಉಪ-ವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಸ್ಥಳಕ್ಕೆ ಆಗಮಿಸಿ ಬೋಟ್‌ ವ್ಯವಸ್ಥೆ ಮಾಡಿದ್ದಾರೆ.


Spread the love

About Laxminews 24x7

Check Also

ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Spread the love ಸೋಷಿಯಲ್‌ ಮೀಡಿಯಾ ಕುರಿತು ಹಲವು ನಟ-ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತುಗಳನ್ನು ತಿರುಚುವ, ಥಂಬ್‌ನೈಲ್‌ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ