ಮಂಡ್ಯ: ಒಂದೆಡೆ ದೇಶದಲ್ಲಿ ಕೊರೊನಾ ರಣತಾಂಡವವಾಡ್ತಿದೆ. ಹೀಗಿರುವಾಗ ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಲಾಗಿದೆ. ಆದರೆ ಇದನ್ನ ಉಲ್ಲಂಘಿಸಿ ಕೆಆರ್‍ಎಸ್ ಡ್ಯಾಂ ಬಳಿ ಭರ್ಜರಿ ಪಾರ್ಟಿ ನಡೆದಿದೆ.
ಕೆಆರ್‍ಎಸ್ ಸಮೀಪದ ತೋಟದಲ್ಲಿ ಆರ್ಕೆಸ್ಟ್ರಾ ಧ್ವನಿವರ್ಧಕ ಬಳಸಿ, ಪೆಂಡಾಲ್ ಹಾಕಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮೈಸೂರು ಮೂಲದ ಸಂಜಯ್ ಎಂಬವರಿಗೆ ಸೇರಿದ ತೋಟ ಇದಾಗಿದೆ.

ಪೊಲೀಸ್ ಠಾಣೆ ಸಮೀಪ ಪಾರ್ಟಿ ನಡೆಯುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದರು. ಅಲ್ಲದೆ ತಡರಾತ್ರಿಯಲ್ಲಿ ಇದನ್ನ ಕೇಳಲು ಹೋದ ಸಾರ್ವಜನಿಕರಿಗೆ ಅವಾಜ್ ಹಾಕಿದ್ದಾರೆ.
Laxmi News 24×7