ಬೆಂಗಳೂರು: ಸದ್ಯ 6, 7 ಮತ್ತು 8ನೇ ತರಗತಿ ಆರಂಭಿಸಲು ತೀರ್ಮಾನಿಸಿದ್ದೇವೆ. ಪರಿಸ್ಥಿತಿ ಅವಲೋಕಿಸಿ 1 ರಿಂದ 5ನೇ ತರಗತಿ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಸದ್ಯ ಯಾವುದೇ ಚರ್ಚೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರ‍್ಯಾಲಿ, ಚುನಾವಣೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವ ಸಂಬಂಧ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಗೆ ರಾಷ್ಟ್ರೀಯ ವಿಪತ್ತು ಪರಿಹಾರ …
Read More »ಜು. 14ರ ವರೆಗೆ ಭಾರೀ ಮಳೆ ನಿರೀಕ್ಷೆ : ಹವಾಮಾನ ಇಲಾಖೆ ಮುನ್ಸೂಚನೆ
ಬಂಗಾಲಕೊಲ್ಲಿಯ ಪಶ್ಚಿಮ ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಇದರ ಪ್ರಭಾವದಿಂದ ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಜು. 14ರ ವರೆಗೆ ವ್ಯಾಪಕ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ ಜು. 11ರಂದು ರೆಡ್, ಜು. 12 ಮತ್ತು 13ರಂದು ಆರೆಂಜ್ ಹಾಗೂ …
Read More »ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ B.S.Y.
ಬೆಂಗಳೂರು: ನಾಯಕತ್ವದ ಬದಲಾವಣೆಯ ವಿಷಯದಲ್ಲಿ ಮೌನ ಕಾಪಾಡಿಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಈಗ ಮೌನ ಮುರಿದು ಕೊನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಗುರುವಾರ ವಿಧಾನ ಸೌಧದಲ್ಲಿ ಮಾತನಾಡಿದ ಅವರು, “ಪ್ರಸ್ತುತ, ನನ್ನ ಆದ್ಯತೆಗಳು COVID-19 ಸೋಂಕುಗಳ ನಿಯಂತ್ರಣದಲ್ಲಿದೆ. ಜನರ ಕಲ್ಯಾಣಕ್ಕೆ ಒತ್ತು ನೀಡುವುದು ನನ್ನ ಆದ್ಯತೆ. ಬೇರೆ ಯಾವುದೇ ಸಮಸ್ಯೆಗಳು ನನ್ನ ಮುಂದೆ ಇಲ್ಲ “ಎಂದು ಅವರು ಪ್ರತಿಕ್ರಿಯಿಸಿದರು. “ಯಾರು ದೆಹಲಿಗೆ ಹೋಗಿ ಹಿಂದಿರುಗಿದರೂ ಅವರು ತಮ್ಮ ಉತ್ತರಗಳನ್ನು ಪಡೆದಿದ್ದಾರೆ. COVID …
Read More »ಕೇಂದ್ರ ಸರ್ಕಾರದಿಂದ ನೌಕರರಿಗೆ ಭರ್ಜರಿ ಗುಡ್ ನ್ಯೂಸ್
ನವದೆಹಲಿ : ವೇತನ ಸಂಹಿತೆ ಮಸೂದೆಯ ವ್ಯಾಪ್ತಿಯ ಅಡಿಯಲ್ಲಿ ಕೆಲಸದ ಸಮಯ, ವೇತನ ರಚನೆ, ಟೇಕ್-ಹೋಮ್ ವೇತನ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಯಿಟಿಗೆ ಸಂಬಂಧಿಸಿದ ಹಲವಾರು ಬದಲಾವಣೆಗಳನ್ನು ಸರ್ಕಾರಿ ನೌಕರರಿಗೆ ಜಾರಿಗೆಗೊಳಿಸಿದೆ. ವೇತನ ಮಸೂದೆ 2019 ರ ಮಸೂದೆ /ಸಂಹಿತೆಯನ್ನು 2019 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಸರ್ಕಾರವು ಹೊಸ ಕಾರ್ಮಿಕ ಸಂಹಿತೆಯಲ್ಲಿ ನಿಯಮಗಳ ಅನುಷ್ಠಾನವನ್ನು ಏಪ್ರಿಲ್ 1 ರಿಂದ ಜಾರಿಗೆ ತರಲು ಬಯಸಿದರೂ ಮುಂದೂಡಿತು, ಇದರಿಂದ ರಾಜ್ಯಗಳು ವೇತನ ನಿಯಮ …
Read More »ನ್ಯಾಯಾಧೀಶರು ಸಿಟ್ಟಾಗಿದ್ದು ಕುಮಾರಸ್ವಾಮಿ ವಿರುದ್ಧ ಬಂಧನ ವಾರಂಟ್ ಹೊರಡಿಸುವುದಾಗಿ ಎಚ್ಚರಿಕೆ
ರಾಮನಗರ: ನ್ಯಾಯಾಲಯದ ಎಚ್ಚರಿಕೆ ನಡುವೆಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ರಾತ್ರಿ ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾದರು. ಕೆಲವು ದಿನಗಳ ಹಿಂದಷ್ಟೇ ಕುಮಾರಸ್ವಾಮಿ ಬೆಂಗಳೂರಿನ ನ್ಯಾಯಾಲಯವೊಂದರಲ್ಲಿ ಪ್ರಕರಣವೊಂದರ ವಿಚಾರಣೆಗೆ ಗೈರಾಗಿದ್ದರು. ಎಚ್.ಡಿ. ದೇವೇಗೌಡರಿಗೆ ಕೋವಿಡ್ ಸೋಂಕು ತಗುಲಿದ ಕಾರಣ ಕುಮಾರಸ್ವಾಮಿ ಕ್ವಾರಂಟೈನ್ ಆಗಿದ್ದು, ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯಕ್ಕೆ ಬಂದಿಲ್ಲ ಎಂದು ಎಚ್ ಡಿಕೆ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಇದಕ್ಕೆ ನ್ಯಾಯಾಧೀಶರು ಸಿಟ್ಟಾಗಿದ್ದು, …
Read More »ಕುಡಿಯುವ ನೀರಿಗಾಗಿ ಗದಗನ ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪರದಾಟ
ಗದಗ : ಕುಡಿಯುವ ನೀರಿನ ಸಮಸ್ಯೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಇಂದು ನಗರದ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ನಗರದ ಹೊಂಬಳ ಗ್ರಾಮದ ರಸ್ತೆಯಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ನೀರಿನ ಅಭಾವ ಉಂಟಾಗಿದೆ. ಜಿಲ್ಲೆಯ ಮಹತ್ವದ ಯೋಜನೆಯಾಗಿರುವ 24/7 ಕುಡಿಯುವ ನೀರು ಸರಬರಾಜುವಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದರೂ, ಎರಡು ವರ್ಷಗಳಿಂದ ಕಾಲೇಜಿಗೆ ನದಿ ನೀರು ಒಂದು ಹನಿ ಸಹಿತ ನೀರು ಪೂರೈಕೆ …
Read More »ಬೆಳಗಾವಿಯಲ್ಲಿ ಇರುವ ಕಲಾವಿದರಿಗೆ ಒಂದು ಸುವರ್ಣ ಅವಕಾಶ
ಬೆಳಗಾವಿ:ಬೆಳಗಾವಿಯಲ್ಲಿ ಇರುವ ಕಲಾವಿದರಿಗೆ ಒಂದು ಸುವರ್ಣ ಅವಕಾಶ ತಮ್ಮ ಪ್ರತಿಭೆಯನ್ನ ತೋರಿಸಲು ಶಬರಿ ಪ್ರೊಡಕ್ಷನ್ ಅವರು ಚಿನ್ನದ ಚೂರಿ ಎಂಬ ಒಂದು ಕಿರುಚಿತ್ರವನ್ನು ಮಾಡ್ತಿದ್ದಾರೆ. ಈ ಒಂದು ಕಿರುಚಿತ್ರದಲ್ಲಿ ನಟಿಸಲು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬುದು ಈ ಚಿತ್ರದ ನಿರ್ದೇಶಕರ ಉದ್ದೇಶ ವಾಗಿದೆ. ಇದೆ ಭಾನುವಾರ ಬೆಳಗಾವಿಯ ಜಿಲ್ಲಾ ಪಂಚಾಯತಿ ಕಛೇರಿ ಹತ್ತಿರ ಇರುವ ಶಬರಿ ಸೇವಾ ಕಚೇರಿಯಲ್ಲಿ ತಾವು ಬಂದು ಆಡಿಷನ ನಲ್ಲಿ ಭಾಗವಹಿಸಿ. ನಮ್ಮ ಉತ್ತರ ಕರ್ನಾಟಕದ …
Read More »ರಾಜ್ಯ ಸರ್ಕಾರದಿಂದ ವಸತಿ ರಹಿತರಿಗೆ ಗುಡ್ ನ್ಯೂಸ್ : `GPS’ ಆಧರಿಸಿ ಹಣ ಬಿಡುಗಡೆ
ಚಿತ್ರದುರ್ಗ : ವಸತಿ ರಹಿತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಜಿಪಿಎಸ್ ಆಧರಿಸಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಸತಿ ಯೋಜನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳಿಂದ ದೂರು ಬರುತ್ತಿವೆ. ಸಕಾಲಕ್ಕೆ ಹಣ ಬಿಡುಗಡೆಯಾಗದ ಕಾರಣ ಮೂರು ತಿಂಗಳ ವಿಜಿಲ್ ಆಪ್ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ. ಇನ್ನು ವಿಜಲ್ ಆಯಪ್ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲು …
Read More »ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ಸಂತೋಷ್ ಜಾರಕಿಹೊಳಿ…
ಗೋಕಾಕ: ಇಂದಿನ ಮಕ್ಕಳು ಮುಂದಿನ ಭವಿಷ್ಯ ಹಾಗೂ ಎಂದು ರಾಜ್ಯಾದ್ಯಂತ ಪಲ್ಸ ಪೋಲಿಯೋ ದಿನಾಚರಣೆ ಸದಾ ಸಾಮಾಜಿಕ ಕಳಕಳಿ ಹಾಗೂ ಕಾಳಜಿ ಯಲ್ಲಿರುವ ಶ್ರೀ ಸಂತೋಷ್ ಜಾರಕಿಹೊಳಿ ಅವರು ಯಾವತ್ತೂ ಪ್ರಚಾರ ಬೇಡ ಎಂದು ಹೇಳುತ್ತಾರೆ ಆದರೆ ಅವರ ಗೆಳೆಯರ ಬಳಗ ಸಾಹುಕಾರರು ಮಾಡುವ ಚಿಕ್ಕ ಚಿಕ್ಕ ಕೆಲಸ ಗಳು ಸಮಾಜಕ್ಕೆ ತಿಳಿಯಲಿ ಎಂದು ಅವರು ಮಾಡುವ ಎಲ್ಲ ಕೆಲಸ ಕಾರ್ಯ ಗಳನ್ನ ಸೇರಿ ಹಿಡಿದು ವಾಹಿನಿಗೆ ಸಂದೇಶ ರವಾನೆ …
Read More »ಪ್ರಧಾನಿ ಮೋದಿಯವರು ತಾವು ಪ್ರಧಾನಿಯಲ್ಲ, ಸಾಮಾನ್ಯ ಸೇವಕ ಎನ್ನುವಾಗ ನಾನು ಸಾಮಾನ್ಯ ಕಾರ್ಯಕರ್ತನೆ
ವಿಜಯಪುರ: ಯತ್ನಾಳ್ ಓರ್ವ ಆರ್ಡಿನರಿ ಶಾಸಕ ಎಂಬ ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸದಾನಂದಗೌಡ ಹೇಳಿದ್ದು ನೂರಕ್ಕೆ ನೂರರಷ್ಟು ನಿಜ. ಒಳ್ಳೆಯ ಸಲಹೆ ನೀಡಿದ್ದಾರೆ. ನಮ್ಮ ಪ್ರಧಾನಿ ಮೋದಿಯವರು ತಾವು ಪ್ರಧಾನಿಯಲ್ಲ, ಸಾಮಾನ್ಯ ಸೇವಕ ಎನ್ನುವಾಗ ನಾನು ಸಾಮಾನ್ಯ ಕಾರ್ಯಕರ್ತನೆ ಎಂದು ಹೇಳಿದ್ದಾರೆ. ನಾನು ಓರ್ವ ಸಾಮಾನ್ಯ ಶಾಸಕ. ರಾಷ್ಟ್ರೀಯ ನಾಯಕ ಎಂದು ನಾನೆಲ್ಲೂ ಹೇಳಿಲ್ಲ. ನಾನು ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವನಾಗಿದ್ದೆ. ಡಿ.ವಿ.ಸದಾನಂದಗೌಡರು …
Read More »