Breaking News

ಸರಕು ಸಾಗಣೆ, ಜನರ ಪ್ರಯಾಣ: ನವೆಂಬರ್​​ ತಿಂಗಳ ಆದಾಯದಲ್ಲಿ ನೈಋತ್ಯ ರೈಲ್ವೆ ಹೊಸ ದಾಖಲೆ

Spread the love

ಹುಬ್ಬಳ್ಳಿ: ನೈಋತ್ಯ ರೈಲ್ವೆಯು ನವೆಂಬರ್ 2025ರಲ್ಲಿ ಸರಕು ಸಾಗಣೆ ಮತ್ತು ಆದಾಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿ, ಪ್ರಮುಖ ಕಾರ್ಯಾಚರಣ ಕ್ಷೇತ್ರಗಳಲ್ಲಿ ತನ್ನ ಸಕಾರಾತ್ಮಕ ಸಾಧನೆಯ ವೇಗವನ್ನು ಮುಂದುವರೆಸಿದೆ.

ಈ ತಿಂಗಳು ನೈಋತ್ಯ ವಲಯವು 4.469 ಮಿಲಿಯನ್ ಟನ್ ಮೂಲ ಸರಕು ಸಾಗಣೆಯನ್ನು ನಿರ್ವಹಿಸಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ ಸಾಧಿಸಿದ 3.941 ಮಿಲಿಯನ್ ಟನ್‌ಗಿಂತ ಶೇ.13.4ರಷ್ಟು ಹೆಚ್ಚಾಗಿದೆ. ಸ್ಟೀಲ್ ಕಾರ್ಖಾನೆಗೆ ಕಚ್ಚಾ ಸಾಮಗ್ರಿ (RMSP), ಪಿಗ್ ಐರನ್ ಮತ್ತು ಉಕ್ಕು, ಕಬ್ಬಿಣದ ಅದಿರು, ರಸಗೊಬ್ಬರ, ಕಂಟೈನರ್‌ಗಳು ಮತ್ತು ಇತರ ಸರಕುಗಳ ಹೆಚ್ಚು ಲೋಡಿಂಗ್ ಈ ಸಾಧನೆಗೆ ಕಾರಣವಾಗಿದೆ.

ನೈಋತ್ಯ ರೈಲ್ವೆಯು ಸ್ಟೀಲ್ ಕಾರ್ಖಾನೆಗೆ 0.214 ಮಿಲಿಯನ್ ಟನ್​ಗಳಷ್ಟು ಕಚ್ಚಾ ಸಾಮಗ್ರಿಗಳನ್ನು ಸಾಗಿಸುವ ಮೂಲಕ ಶೇ.185ಕ್ಕಿಂತ ಹೆಚ್ಚು ಅಸಾಧಾರಣ ಬೆಳವಣಿಗೆ ದಾಖಲಿಸಿದೆ. ಪಿಗ್ ಐರನ್ ಮತ್ತು ಸಿದ್ಧಪಡಿಸಿದ ಉಕ್ಕು ಒಟ್ಟಿಗೆ ಶೇ.28.5 ಏರಿಕೆ ಕಂಡು, 0.806 ಮಿಲಿಯನ್ ಟನ್‌ಗೆ ತಲುಪಿವೆ. ಕಲ್ಲಿದ್ದಲು ಲೋಡಿಂಗ್ 0.732 ಮಿಲಿಯನ್ ಟನ್ ಆಗಿದೆ. ಕಬ್ಬಿಣದ ಅದಿರು ಸಾಗಣೆ ಶೇ.6ರಷ್ಟು ಏರಿಕೆ ಕಂಡು, 1.951 ಮಿಲಿಯನ್ ಟನ್ ತಲುಪಿದೆ. ರಸಗೊಬ್ಬರ ಲೋಡಿಂಗ್ 0.129 ಮಿಲಿಯನ್ ಟನ್ ಆಗಿದ್ದು, ಶೇ.40.2 ಬೆಳವಣಿಗೆ ಪಡೆದುಕೊಂಡಿದೆ. ಕಂಟೈನರ್ ಸಂಚಾರ ಶೇ.15.3 ಮತ್ತು ಇತರ ಸರಕುಗಳು ಶೇ.29.6ರಷ್ಟು ಏರಿಕೆಯನ್ನು ಕಂಡು, ನೈಋತ್ಯ ರೈಲ್ವೆಯು ತನ್ನ ಬಲವಾದ ಸರಕು ನಿರ್ವಹಣಾ ಸಾಮರ್ಥ್ಯ ಮತ್ತು ಕೈಗಾರಿಕಾ ಕ್ಷೇತ್ರದ ನಿರಂತರ ಬೇಡಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ನವೆಂಬರ್ 2025ರ ವರೆಗೂ ಒಟ್ಟು 33.292 ಮಿಲಿಯನ್ ಟನ್ ಸರಕು ಸಾಗಣೆಯಾಗಿದ್ದು, ಕಳೆದ ವರ್ಷದ ಇದೇ ಅವಧಿಯ 28.34 ಮಿಲಿಯನ್ ಟನ್‌ಗಿಂತ ಶೇ.17.5ರಷ್ಟು ಹೆಚ್ಚಾಗಿದೆ. RMSP, ಪಿಗ್ ಐರನ್ ಮತ್ತು ಸ್ಟೀಲ್, ಕಬ್ಬಿಣದ ಅದಿರು, ರಸಗೊಬ್ಬರ ಹಾಗೂ ಕಂಟೈನರ್ ಸರಕುಗಳಲ್ಲಿ ಕಂಡುಬಂದ ಸುಧಾರಣೆಗಳು ನೈಋತ್ಯ ರೈಲ್ವೆಯು ಹೆಚ್ಚುವರಿ ಸರಕುಗಳನ್ನು ಆಕರ್ಷಿಸುವಲ್ಲಿ ಮತ್ತು ಪಾಲುದಾರರೊಂದಿಗೆ ಸಮನ್ವಯತೆ ಸುಧಾರಿಸುವಲ್ಲಿ ಯಶಸ್ಸು ಕಂಡಿದೆ.


Spread the love

About Laxminews 24x7

Check Also

ಕಾಂಗ್ರೆಸ್ ಮಾಜಿ ಶಾಸಕ ಆರ್​.ವಿ.ದೇವರಾಜ್ ನಿಧನ

Spread the loveಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ.ದೇವರಾಜ್ (67) ಅವರು ಸೋಮವಾರ ರಾತ್ರಿ ಮೈಸೂರಿನ ಆಸ್ಪತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ