ಶಿವಮೊಗ್ಗ: ನಿರೀಕ್ಷೆಗೂ ಮೀರಿ ಬಿಹಾರ ಚುನಾವಣೆಯಲ್ಲಿ ಬಿಜೆಪಿಯ ಮೈತ್ರಿ ಗೆಲುವು ಸಾಧಿಸಲಿದೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿಯ ಕೇಂದ್ರ ಸಂಸದಿಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ ವಿಶ್ಬಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಮ್ಮ ನಿರೀಕ್ಷೆ ಮೀರಿ ಬಿಹಾರ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಮೋದಿ ಹಾಗೂ ಅಮಿತ್ ಷಾ ಅವರ ಪರಿಶ್ರಮದಿಂದ ಚುನಾವಣೆಯಲ್ಲಿ ಈಗಾಗಲೇ ಗೆದ್ದಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಅರ್ಡಸ್ ಇಲ್ಲದಂತೆ ಆಗಿದೆ. ಈಗಾಗಲೇ ಎಲ್ಲಾ ಸಮೀಕ್ಷೆಗಳು ಅದನ್ನೇ ಹೇಳುತ್ತಿವೆ. ದೊಡ್ಡ ಗೆಲುವು ಸಾಧಿಸಲಿದ್ದೇವೆ. ಬಿಹಾರದ ಚುನಾವಣೆಯ ಫಲಿತಾಂಶದ ನಂತರ ಎಲ್ಲ ತಿಳಿದು ಬರಲಿದೆ ಎಂದು ತಿಳಿಸಿದರು.
ದೆಹಲಿ ಬ್ಲಾಸ್ಟ್ಗೆ ಅತ್ಯಂತ ವ್ಯವಸ್ಥಿತವಾದ ಪಿತೂರಿ ಮಾಡಿದ್ದರು. ಅಲ್ಯೂಮೀನಿಯಂ ಸಲ್ಪೇಟ್ ರಾಸಾಯನಿಕ ಬಳಕೆ ಮಾಡಿ ಬ್ಲಾಸ್ಟ್ ಮಾಡಿದ್ದಾರೆ. ಇದರ ಹೊಣೆಹೂತ್ತವರಿಗೆ ಗತಿ ಕಾಣಿಸುವುದಾಗಿ ಪ್ರಧಾನಮಂತ್ರಿ ಹಾಗು ಗೃಹ ಸಚಿವರು ಹೇಳಿದ್ದಾರೆ. ದೊಡ್ಡ ಅನಾಹುತವಾಗುವುದನ್ನು ತಡೆದಿದ್ದಾರೆ. ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಲಾಗಿದೆ. ಬಹಳ ಪ್ರಮಾಣದಲ್ಲಿ ಈ ಕೃತ್ಯದಲ್ಲಿ ಒಂದು ಸಮಾಜದವರು ಭಾಗಿಯಾಗಿರುವುದು ಜಗಜ್ಜಾಹೀರಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಸ್ವಲ್ಪ ಯಾಮಾರಿದ್ದರೂ ಸಹ ದೊಡ್ಡ ಅನಾಹುತವಾಗುತ್ತಿತ್ತು. ಬಹಳ ಆಶ್ಚರ್ಯಕರ ಸಂಗತಿ ಎಂದರೆ, ದಾಳಿ ಹಿಂದೆ ಇರುವವರು ಮಹಿಳಾ ಹಾಗೂ ಪುರುಷ ವೈದ್ಯರು ಎಂದರು.
ನವೆಂಬರ್ ಕ್ರಾಂತಿಯ ಬಗ್ಗೆ ನಾವು ಮಾತನಾಡುವುದಿಲ್ಲ. ಇಂತಹ ಸಣ್ಣ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
Laxmi News 24×7