ಬಳ್ಳಾರಿ

ವಾಲ್ಮೀಕಿ ನಿಗಮ ಹಗರಣ: ಶಾಸಕ ಬಿ. ನಾಗೇಂದ್ರ ಆಪ್ತ ಸಹಾಯಕರು ಇ.ಡಿ ವಶಕ್ಕೆ

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರ ಬಳ್ಳಾರಿ ನಿವಾಸದ ಮೇಲೆ ಬುಧವಾರ ಮುಂಜಾನೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, ವಿಜಯಕುಮಾರ್ ಮತ್ತು ಚೇತನ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ಇಬ್ಬರೂ ನಾಗೇಂದ್ರ ಅವರ ಆಪ್ತ ಸಹಾಯಕರಾಗಿದ್ದರು‌. ಬುಧವಾರ ಮುಂಜಾನೆ, ಸಿಆರ್ಪಿಎಫ್ ಭದ್ರತೆಯೊಂದಿಗೆ ಮೂರು ತಂಡಗಳಾಗಿ ಬಳ್ಳಾರಿಗೆ ಆಗಮಿಸಿದ ಇ.ಡಿ, ದಾಳಿ ನಡೆಸಿತು. ನಾಗೇಂದ್ರ ಅವರ ಬೆಂಗಳೂರಿನ ನಿವಾಸದಲ್ಲೂ ಶೋಧ ನಡೆಯುತ್ತಿದೆ. ಸ್ಥಳೀಯ ಪೊಲೀಸರಿಗೂ …

Read More »

ಬಳ್ಳಾರಿಯಲ್ಲಿ ಪೊಲೀಸರ ಕಾರ್ಯಾಚರಣೆ :10 ಲಕ್ಷ ರೂ. ನಗದು, 131.13 ಲೀ ಮದ್ಯ ವಶ

ಬಳ್ಳಾರಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಬುಧವಾರದಂದು ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 10 ಲಕ್ಷ ನಗದು ಹಣ ಸೇರಿ 131.13 ಲೀಟರ್ (ರೂ.50,268 ಸಾವಿರ ಬೆಲೆಬಾಳುವ) ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಮಾಹಿತಿ ನೀಡಿದ್ದಾರೆ.   ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಒಟ್ಟು 43 …

Read More »

ಈ ಬಾರಿ ಬಳ್ಳಾರಿ ಗ್ರಾಮೀಣದಿಂದ ಸ್ಪರ್ಧೆ: ಸಚಿವ ಶ್ರೀರಾಮುಲು

ಬಳ್ಳಾರಿ: ಈ ಬಾರಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪ ರ್ಧಿಸುತ್ತೇನೆಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಿದ್ದೇನೆ. ಇದೀಗ ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಈ ಕುರಿತು ಪಕ್ಷದ ಹೈಕಮಾಂಡ್‌ ಗಮನಕ್ಕೂ ತಂದಿದ್ದೇನೆ. ಸಂಡೂರು ಅಥವಾ ಬಳ್ಳಾರಿ ಗ್ರಾಮೀಣ ಕ್ಷೇತ್ರ ಎಂಬ ಆಯ್ಕೆಯಿತ್ತು. ಆದರೆ, ಬಹುತೇಕ ಎಲ್ಲರ ಅಪೇಕ್ಷೆಯ ಮೇರೆಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು. ಮಾಜಿ …

Read More »

ಕಲಾವಿದರನ್ನೂ ಬಿಡದ ಪರ್ಸೆಂಟೇಜ್​; ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಅಮಾನತು

ಬಳ್ಳಾರಿ: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಸರ್ಕಾರದ ಶೇ. 40 ಕಮಿಷನ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಇನ್ನಷ್ಟು ಅಕ್ರಮ ಹೊರಬಿದ್ದಿದೆ. ಈ ಹಿಂದೆ ಗುತ್ತಿಗೆದಾರರ ವಿಷಯದಲ್ಲಿ ಕಮಿಷನ್ ವಿರುದ್ಧ ಕೂಗೆದ್ದಿತ್ತು, ಈಗ ಕಲಾವಿದರೂ ಕಮಿಷನ್​ ವಿರುದ್ಧ ದನಿ ಎತ್ತಿದ್ದಾರೆ. ಪರಿಣಾಮವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ‌ಇಲಾಖೆ ಅಧಿಕಾರಿಯಾಗಿರುವ ಸಿದ್ದಲಿಂಗೇಶ್ವರ್ ರಂಗಣ್ಣನವರ್ ಅಮಾನತು ಆದವರು. ಇವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ …

Read More »

ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆಗೆ ಸಿದ್ಧ: ಸೋಮಶೇಖರ್ ರೆಡ್ಡಿ

ಬಳ್ಳಾರಿ: ಹೊಸ ಪಕ್ಷವನ್ನು ಸ್ಥಾಪಿಸಿರುವ ಜನಾರ್ದನ ರೆಡ್ಡಿ ವಿರುದ್ಧವೇ ಅವರ ಸಹೋದರ ಸೋಮಶೇಖರ ರೆಡ್ಡಿ ಅವರು ಅಸಮಾಧಾನ ಹೊರ ಹಾಕಿದ್ದಾರೆ(Karnataka Election). ಪಕ್ಷ ಕಟ್ಟುವುದು ಬೇಡವೆಂದರೂ ಕೇಳಲಿಲ್ಲ ನಮ್ಮ ಸಹೋದರ. ಪಕ್ಷ ಕಟ್ಟಿರುವುದಕ್ಕೆ ಏನು ಮಾಡುವುದಕ್ಕೆ ಆಗುತ್ತದೆ. ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ನಾನು ಸ್ಪರ್ಧಿಸುವುದು ನಿಶ್ಚಿತ. ಜನಾರ್ದನ ರೆಡ್ಡಿ ಬಂದು ನಿಂತರೂ ನಾನು ಸ್ಪರ್ಧಿಸುತ್ತೇನೆ, ಇದಕ್ಕಿಂತ ನಾನು ಇನ್ನೇನು ಹೇಳಬೇಕು ಎಂದು ಅವರು ಕೇಳಿದ್ದಾರೆ. ಯಾವತ್ತಿಗೂ ಬಿಜೆಪಿ ಪಾರ್ಟಿ ಬಿಡುವುದಿಲ್ಲ, …

Read More »

102 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಜ್ಜಾದ ರೆಡ್ಡಿ; ಜ.16ಕ್ಕೆ 25 ಅಭ್ಯರ್ಥಿಗಳ ಘೋಷಣೆ

ಬಳ್ಳಾರಿ: ಬಿಜೆಪಿ ಮೇಲೆ ಮುನಿಸಿಕೊಂಡು ಪ್ರತ್ಯೇಕ ರಾಜಕೀಯ ಪಕ್ಷ ಘೋಷಿಸಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 102 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ.   ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಗಣಿನಾಡು ಬಳ್ಳಾರಿ, ದಕ್ಷಿಣ ಭಾರತದಲ್ಲೇ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅ ಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜನಾರ್ದನ ರೆಡ್ಡಿ ಈಗ ಬಿಜೆಪಿ ಮೇಲೆಯೇ ಮುನಿಸಿಕೊಂಡು “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ರಾಜಕೀಯ …

Read More »

ರಾಷ್ಟ್ರ ಧ್ವಜಗಳ ಬಾಕಿ ಪಾವತಿಗೆ ಡಿ.ಸಿ.ಗಳಿಗೆ ಪತ್ರ

ಬಳ್ಳಾರಿ: ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಡೆದ ಮೂರು ದಿನಗಳ ‘ಹರ್‌ ಘರ್‌ ತಿರಂಗಾ ಅಭಿಯಾನ’ಕ್ಕೆ ಕೇಂದ್ರ ಸರ್ಕಾರ ಪೂರೈಸಿದ್ದ ರಾಷ್ಟ್ರಧ್ವಜಗಳ ₹ 4,39,92,843 ಬಾಕಿಯನ್ನು ತಕ್ಷಣ ಪಾವತಿಸುವಂತೆ ತಾಕೀತು ಮಾಡಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಎರಡನೇ ಪತ್ರ ಬರೆದಿದೆ.   ಆಗಸ್ಟ್ 13ರಿಂದ 15ರವರೆಗೆ ಮನೆಗಳು, ಕಚೇರಿಗಳು ಹಾಗೂ ವಾಹನಗಳ ಮೇಲೆ ರಾಷ್ಟ್ರ ಧ್ವಜ ಹಾರಾಡಿದ್ದವು. ‘ಏಳು ದಶಕಗಳಿಂದ ಬಳಸುತ್ತಿದ್ದ ಖಾದಿ ಬಟ್ಟೆಯ ತ್ರಿವರ್ಣ ಧ್ವಜಗಳಿಗೆ ಇತಿಶ್ರೀ ಹೇಳಿ, ತೆಳು …

Read More »

ಶಾಲಾ ಪ್ರವಾಸದ ವೇಳೆ ಕಾಲು ಜಾರಿ ಬಿದ್ದು ವಿದ್ಯಾರ್ಥಿನಿ ಸಾವು

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕೆ ಬೆಳಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಕೈಗೊಳ್ಳಲಾಗಿದ್ದ ಪ್ರವಾಸ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. 10ನೇ ತರಗತಿಯಲ್ಲಿ ಓದುತ್ತಿದ್ದ ನಾಗಲಕ್ಷ್ಮಿ(16) ಮೃತ ವಿದ್ಯಾರ್ಥಿನಿ. ಶ್ರವಣಬೆಳಗೊಳದಲ್ಲಿ ಮೆಟ್ಟಿಲು ಹತ್ತುವಾಗ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ಬಿ.ಇ.ಒ ಗುರಪ್ಪ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೆ.ಬೆಳಗಲ್ ಗ್ರಾಮಕ್ಕೆ ತೆರಳಿ ಘಟನೆ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ …

Read More »

ಮಸೀದಿಗೂ ಕನ್ನ ಹಾಕಿದ ಖದೀಮರು: ಅಂದಾಜು 2 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನ

ಬಳ್ಳಾರಿ, ಡಿ.06:ಹೊಸಪೇಟೆ ರಸ್ತೆಯ ಅಲ್ಲಿಪುರ ಬಸ್ ನಿಲ್ದಾಣ ಸಮೀಪ, ಮಜೀದ್ ಎ ಆಲಿಯಾದಲ್ಲಿ ಕಳ್ಳತನ ಶನಿವಾರ ರಾತ್ರಿ ನಡೆದಿದೆ. ಮಸೀದಿಯಲ್ಲಿದ್ದ ವೆಂಟಿಲೇಟರ್‍ಗಳು, ಗ್ರಿಲ್‍ಗಳು, ಯುಪಿಎಸ್ ಬ್ಯಾಟರಿ, ಕಟ್ಟಡ ನಿರ್ಮಾಣಕ್ಕೆ ಇಡಲಾಗಿದ್ದ ಕಬ್ಬಿಣ, 14 ಕಬ್ಬಿಣದ ಕಿಟಕಿಗಳು, ನೀರಿನ ಸಂಪ್‍ನ ಬಾಗಿಲುಗಳು ಸೇರಿದಂತೆ ಅಂದಾಜು 2 ಲಕ್ಷ ರೂ.   ಮಾಲೀಕರು, ನಿರ್ವಹಣೆ ಹೊಂದಿರುವ ಆಲಿಯಾಬೇಗಂ ಅವರು ತಿಳಿಸಿದರು.   ಈ ಹಿಂದೆ ಮೂರು ಸಲ ಕಳ್ಳತನ ಆದಾಗಲೂ ಕೂಡ ಗ್ರಾಮೀಣ …

Read More »

ಜನಾರ್ದನರೆಡ್ಡಿ ರಾಜಕೀಯದಲ್ಲಿ ಸಕ್ರಿಯ ಆಗುತ್ತಿದ್ದಂತೆ ಗಣಿ ಅಕ್ರಮ ಕೇಸ್‌ಗಳಿಗೆ ಸಿಕ್ಕಿತು ವೇಗ!

ಬಳ್ಳಾರಿ: ಕಾಕತಾಳೀಯವೋ ಏನೋ… ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜಕೀಯದಲ್ಲಿ ಮತ್ತೆ ಸಕ್ರಿಯ ಆಗುತ್ತಿದ್ದಂತೆ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ವೇಗ ಸಿಕ್ಕಿದಂತಾಗಿದೆ. ಸುಪ್ರಿಂ ಕೋರ್ಟ್​​ ಸೂಚನೆ ಮೇರೆಗೆ ಇಂದಿನಿಂದ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ತ್ವರಿತ ವಿಚಾರಣೆ ನಡೆಸಲಿದೆ.   ಹೈದ್ರಾಬಾದ್​​ನಲ್ಲಿರುವ ಸಿಬಿಐ ವಿಶೇಷ ಕೋರ್ಟ್​ನಲ್ಲಿ ಪ್ರಮುಖ ಸಾಕ್ಷಿಗಳ ವಿಚಾರಣೆ‌ ಇಂದಿನಿಂದ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸಾಕ್ಷಿ ಉದ್ಯಮಿ ಟಪಾಲ್ ಏಕಾಂಬರಂಗೆ ನ್ಯಾಯಾಲಯಕ್ಕೆ​​ಗೆ ಹಾಜರಾಗುವಂತೆ ಸಮನ್ಸ್​​ …

Read More »