ಚಿಕ್ಕೋಡಿ : ಲಾಕ್‍ಡೌನ್ ಇದ್ದರೂ ಮನೆಯಿಂದ ಹೊರಗೆ ಬರಬೇಡಿ ಎಂದು ಪೊಲೀಸರು ಮನವಿ ಮಾಡಿಕೊಂಡರೂ ಕೇಳದೇ ಅನಾವಶ್ಯಕವಾಗಿ ರಸ್ತೆಯಲ್ಲಿ ಅಡ್ಡಾಡಿ ಲಾಕ್‍ಡೌನ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ಬುಧುವಾರ 52 ದ್ವಿಚಕ್ರವಾಹಗಳನ್ನು ಸೀಜ್ ಮಾಡಿದ್ದಾರೆ.

ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ತೊಲಗಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಹೇರಲಾಗಿದೆ. ಸಾರ್ವಜನಿಕರು ಮನೆಯಲ್ಲಿಯೇ ಇರುವ ಮೂಲಕ ಲಾಕ್‍ಡೌನ್ ಪಾಲಿಸಿ ಎಂದು ಪೊಲೀಸರು ಮನವಿ ಮಾಡಿದರೂ ಕೇಳದ ಹಿನ್ನೆಲೆಯಲ್ಲಿ ಬುಧೂವಾರ ಡಿವೈಎಸ್ಪಿ ಮನೋಜ ನಾಯಿಕ ಮತ್ತು ಸಿಪಿಐ ಆರ್.ಆರ್.ಪಾಟೀಲ ನೇತೃತ್ವದಲ್ಲಿ ಪಿಎಸ್‍ಐ ರಾಕೇಶ ಬಗಲಿ ಹಾಗೂ ಪಟ್ಟಣ ಪೊಲೀಸ ಠಾಣೆ ಮತ್ತು ಸಂಚಾರಿ ಪೊಲೀಸ ಠಾಣೆಯ ಸಿಬ್ಬಂದಿ ಪಟ್ಟಣದಲ್ಲಿ ಲಾಕ್‍ಡೌನ್ ಪಾಲನೆಯ ನಿಟ್ಟಿನಲ್ಲಿ ಕರ್ತವ್ಯ ನಿರತರಾಗಿದ್ದಾಗ ರಸ್ತೆಯಲ್ಲಿ ಜನರು ಅನಾವಶ್ಯಕವಾಗಿ ಅಡ್ಡಾಡುತ್ತಿರುವದನ್ನು ಕಂಡು ಲಾಠಿ ರುಚಿ ತೋರಿಸಿದರೂ ಕೇಳದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಮನೋಜ ನಾಯಿಕ ಮತ್ತು ಸಿಪಿಐ ಆರ್.ಆರ್.ಪಾಟೀಲ ನೇತೃತ್ವದಲ್ಲಿ ಪಿಎಸ್‍ಐ ರಾಕೇಶ ಬಗಲಿ ಹಾಗೂ ಪಟ್ಟಣ ಪೊಲೀಸ ಠಾಣೆ ಮತ್ತು ಸಂಚಾರಿ ಪೊಲೀಸ ಠಾಣೆಯ ಸಿಬ್ಬಂದಿ ಬುಧುವಾರ ಒಂದೇ ದಿನದಲ್ಲಿ 52ಕ್ಕೂ ಹೆಚ್ಚು ದ್ವಿಚಕ್ರವಾಹನ ಸೀಜ್ ಮಾಡಿದ್ದಾರೆ.
Laxmi News 24×7