Home / ಜಿಲ್ಲೆ / ಬೆಳಗಾವಿ / ಗೋಕಾಕ / ಹೃದಯಾಘಾತದಿಂದ ಸಾವನ್ನಪ್ಪಿದ್ದ ವೀರಯೋಧನ ಅಂತ್ಯಕ್ರೀಯೆ ನಗರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಗುರುವಾರ ಮಧ್ಯಾಹ್ನ 1ಗಂಟೆಗೆ ಜರುಗಿತು.

ಹೃದಯಾಘಾತದಿಂದ ಸಾವನ್ನಪ್ಪಿದ್ದ ವೀರಯೋಧನ ಅಂತ್ಯಕ್ರೀಯೆ ನಗರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಗುರುವಾರ ಮಧ್ಯಾಹ್ನ 1ಗಂಟೆಗೆ ಜರುಗಿತು.

Spread the love

ಗೋಕಾಕ: ಜಮ್ಮು ಕಾಶ್ಮೀರ ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್‍ಎಫ್ ಯೋಧ ಈರಣ್ಣ ಬಸಲಿಂಗಪ್ಪ ಶೀಲವಂತ(29) ರಜೆಯಿಂದ ಮರಳಿ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದ ವೀರಯೋಧನ ಅಂತ್ಯಕ್ರೀಯೆ ನಗರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಗುರುವಾರ ಮಧ್ಯಾಹ್ನ 1ಗಂಟೆಗೆ ಜರುಗಿತು.

ಭಾರತಮಾತೆಯ ರಕ್ಷಣೆಗಾಗಿ ಕಳೆದ 10ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಯೋಧ ಈರಣ್ಣ ಅವರ ಪಾರ್ಥಿವ ಶರೀರ ಮುಂಬೈನಿಂದ ರೈಲು ಮಾರ್ಗವಾಗಿ ಬೆಳಿಗ್ಗೆ 8ಗಂಟೆಗೆ ನಗರಕ್ಕೆ ತಲುಪಿತು.

ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕೆಲವು ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಯಿತು. ಗ್ರಾಮದಲ್ಲಿ ಸಾವಿರಾರು ಜನ ಪಾರ್ಥಿವ ಶರೀರ ವಿಕ್ಷಿಸಲು ಬೆಳಗಾವಿ ಜಿಲ್ಲೆಯಾದ್ಯಂತ ವಿವಿಧ ಉರುಗಳಿಂದ ಜನ ಆಗಮಿಸಿ ಅಂತಿಮ ದರ್ಶನ ಪಡೆದರು. ನಂತರ ಮೆರವಣಿಗೆ ಮೂಲಕ ವೀರಯೋಧನ ಪಾರ್ಥಿವ ಶರೀರ ವೀರಶೈವ

ರುದ್ರಭೂಮಿಯತ್ತ ಕೊಂಡೊಯ್ಯುವಾಗ ಅಮರ ರಹೇ ಅಮರ ರಹೇ ಈರಣ್ಣ ಶೀಲವಂತ ಅಮ ರಹೇ ಎಂದು ಘೋಷಣೆಗಳು ಕೇಳಿ ಬಂದವು. ಮಹಾಲಿಂಗೇಶ್ವರ ನಗರ ಶೋಕಸಾಗರದಲ್ಲಿ ಮುಳುಗಿತ್ತು.

ಮುಗಿಲು ಮುಟ್ಟಿದ ಆಕ್ರಂದನ: ತಂದೆ-ತಾಯಿ, ಪತ್ನಿ, ಹಾಗೂ ಸಹೋದರಿಯರನ್ನು ಅಗಲಿದ ಯೋಧ ಈರಣ್ಣ ಪಾರ್ಥಿವ ಶರೀರ ನೋಡುತ್ತಿದ್ದಂತೆ ಕುಟುಂಬಸ್ತರ ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ನಗರದ ವೀರಶೈವ ರುದ್ರಭೂಮಿಯಲ್ಲಿ ಬಿಎಸ್‍ಎಫ್ ಯೋಧರು ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತು ಗುಂಡು ಹಾರಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.


ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಡಿವೈಎಸ್‍ಪಿ ಡಿ ಟಿ ಪ್ರಭು ಸೇರಿದಂತೆ ನಗರಸಭೆ ಸದಸ್ಯರು ವೀರಯೋಧನ ಅಂತಿಮ ದರ್ಶನ ಪಡೆದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ